ರಾಮಯ್ಯ ಗೌಡ ಪೈಕ ಬೊಮ್ಮದೇರೆ ವೈಕುಂಠ ಸಮಾರಾಧನೆ

0

ದೀಪ ಆರಿದೆ ಬೆಳಕು ಇನ್ನೂ ಪಸರಿಸಿಯೇ ಇದೆ: ವೆಂಕಟ್ ದಂಬೆಕೋಡಿ

ರಾಮಯ್ಯ ಗೌಡ ಅವರು ದೀಪದ ಬೆಳಕಿಂತೆ, ದೀಪ ಆರಿದೆ ಬೆಳಕು ಇನ್ನೂ ಪಸರಿಸಿದೆ. ತಂದೆಯಂತೆ ಮಕ್ಜಳೂ ಸಮಾಜದಲ್ಲಿ ಸಾಮಾಜ‌ಮುಖಿ ಕೆಲಸ ಮಾಡುತ್ತಿರುವ ಮನೆತನ ಇದು ಎಂದು ವೆಂಕಟ್ ದಂಬೆಕೋಡಿ ಹೇಳಿದರು.

ಅವರು ಮೇ‌.2 ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆದ, ಇತ್ತೀಚೆಗೆ ನಿಧನರಾದ ರಾಮಯ್ಯ ಗೌಡ ಪೈಕ ಬೊಮ್ಮದೇರೆ ಇವರ ವೈಕುಂಠ ಸಮಾರಾಧನೆ ಸಮಾರಂಭದಲ್ಲಿ ನುಡಿನಮನ‌ ಸಲ್ಲಿಸಿ ಮಾತನಾಡಿದರು.


ಪೈಕದ ಶಾಲೆ ಆಗಬೇಕಾದ್ರೆ ರಾಮಯ್ಯ ಗೌಡ್ರು ಕೂಡ ಪ್ರಧಾನ ಪಾತ್ರ ವಹಿಸಿದ್ದರು. ಬಹಳ ಹಿಂದಿನ ಕಾಲದಲ್ಲೂ ದೂರ ದೃಷ್ಟಿ ಹರಿಸಿ ಕೆಲಸ ಮಾಡಿದವರು.‌ ದೊಡ್ಡ ಕುಟುಂಬದ ನಿಭಾಯಿಸಿಕೊಂಡಿದ್ದ ಅವರು ಸಮಾಜದಲ್ಲಿ ಗುರುತಿಸುವಂತ ಕೆಲಸ ಮಾಡಿದ್ದರು. ತುಂಬು ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸಿದವರು ರಾಮಯ್ಯ ಗೌಡ ಎಂದವರು. ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ‌ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.