*ಭಜರಂಗದಳ ನಿಷೇಧ ಉಲ್ಲೇಖ : ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ ಖಂಡನೆ

0

ಉಲ್ಲೇಖ ಹಿಂಪಡೆಯಲು ಆಗ್ರಹ

ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಪಡೆಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಓಲೈಕೆ ರಾಜಕಾರಣದ ಭಾಗವಾಗಿ ತಾವು ಅಧಿಕಾರಕ್ಕೆ ಬಂದಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದನ್ನು ಸುಳ್ಯ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ, ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಭರವಸೆಯನ್ನು ಪ್ರಣಾಳಿಕೆಯಿಂದ ಹಿಂಪಡೆಯುವಂತೆ ಆಗ್ರಹಿಸುತ್ತದೆ.

ರಾಷ್ಟ್ರ ಕಾರ್ಯ, ಮಾತೆಯರ ರಕ್ಷಣೆ, ಗೋಮಾತೆ ರಕ್ಷಣೆ, ಹಿಂದುತ್ವದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ದೇಶಭಕ್ತರ ಸಂಘಟನೆ ಭಜರಂಗದಳ, ಕೊರೋನಾ, ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ವಿಶೇಷವಾದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ರಾಷ್ಟ್ರದ ಹಮ್ಮೆಯ ಸಂಘಟನೆ ಭಜರಂಗದಳವನ್ನು ರಾಷ್ಟ್ರದ್ರೋಹಿ ಸಂಘಟನೆ ಪಿ.ಎಫ್.ಐಯ ಜೊತೆ ಹೋಲಿಸಿ, ನಿಷೇಧಿಸುವಂತಹ ಕಾಂಗ್ರೆಸ್‌ನ ನೀಚ ಮನಸ್ಥಿತಿ ಕಾಂಗ್ರೆಸ್‌ನ ಅವನತಿಗೆ ಕಾರಣವಾಗಲಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ಗೆ ಒಂದುಗಳ ಮತವನ್ನು ಕೇಳುವ ನೈತಿಕತೆಯೇ ಇಲ್ಲ.

ಕಾಂಗ್ರೆಸ್‌ನ ಶವಪೆಟ್ಟಿಗೆಗೆ ಮೇ 11ರಂದು ಅಂತಿಮ ಮೊಳೆ ಬೀಳಲು ಡಿ.ಕೆ.ಶಿ. ಮತ್ತು ಸಿದ್ದರಾಮಯ್ಯರವರ ಈ ರೀತಿಯಮನಸ್ಥಿತಿ ಕಾರಣವಾಗಲಿದೆ.

ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಯ ಎಲ್ಲಾ ಕಾರ್ಯಕರ್ತರೊಡನೆ ಭಾರತೀಯ ಜನತಾ ಪಾರ್ಟಿಇನ್ನೂ ಮುಂದೆಯೂ ಬೆಂಬಲವಾಗಿ ನಿಲ್ಲಲಿದೆ ಎಂದು‌ಬಿಜೆಪಿ ಮಂಡಲ ಸಮಿತಿ‌ಹೇಳಿಕೆಯಲ್ಲಿ ತಿಳಿಸಿದೆ.