ಜೆಡಿಎಸ್‌ ಮುಖಂಡ ತಿರುಮಲ ಸೋನ ಸಂಪಾಜೆಯಲ್ಲಿ ಕಾಂಗ್ರೆಸ್ ಸೇರ್ಪಡೆ

0

ಸಂಪಾಜೆ ಆಸ್ಪತ್ರೆ ಮೇಲ್ದರ್ಜೆಗೇರಿಸಿ, ಅಡಿಕೆ ಎಲೆ‌ ಹಳದಿ ರೋಗಕ್ಕೆ ಪರಿಹಾರ ನೀಡಿ‌ : ಬೇಡಿಕೆ

ಜೆಡಿಎಸ್ ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದ ತಿರುಮಲ ಸೋನ ಇಂದು ಸಂಪಾಜೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ತಿರುಮಲ ಸೋನರಿಗೆ ಕಾಂಗ್ರೆಸ್ ಶಾಲು‌ ಹಾಕಿ, ಪಕ್ಷದ ಧ್ವಜ ನೀಡಿ‌ ಪಕ್ಷಕ್ಕೆ ಸ್ವಾಗತಿಸಿದರು.

ಕಾಂಗ್ರೆಸ್ ಸೇರ್ಪಡೆ ‌ಬಳಿಕ‌ ಮಾತನಾಡಿದ ತಿರುಮಲರು “ಸಂಪಾಜೆ ಆಸ್ಪತ್ರೆ ಯಲ್ಲಿ ನಿರೀಕ್ಷಿತ ಸೌಲಭ್ಯ ಸಿಗುತ್ತಿಲ್ಲ. ಈ‌ಭಾಗದಲ್ಲಿ ಘಟನೆಗಳು ‌ನಡೆದರೆ ಸುಳ್ಯ‌ ಅಥವಾ ಮಡಿಕೇರಿ ಗೆ ಹೋಗಬೇಕು.‌ ಎರಡೂ ಕಡೆಯೂ 30 ಕೀ.ಮೀ ದೂರ ಆಗುತ್ತದೆ. ಆದ್ದರಿಂದ ಇಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ರಿಸುವ ಕೆಲಸ ಆಗಬೇಕು. ಈ‌ಕುರಿತು‌ ಹಲವು ವರ್ಷದಿಂದ ಬೇಡಿಕೆ ಇಡುತ್ತಿದ್ದರೂ ಅದು ಈಡೇರಿಲ್ಲ. ಇಲ್ಲಿ ಒಳ್ಳೆಯ ಡಾಕ್ಟ್ರು‌ ಬಂದರೆ ಓಡಿಸುವ ಕೆಲಸ ಆಗುತ್ತಿದೆ ಎಂದು‌ ಹೇಳಿದರು. ಸಂಪಾಜೆಯಲ್ಲಿ ಅಡಿಕೆ‌ ಕೃಷಿಕರು‌ ಹೆಚ್ಚಿದ್ದಾರೆ.‌ಅಡಿಕೆಗೆ ಹಳದಿ ಎಲೆ‌ರೋಗ ಆರಂಭವಾದುದೇ ಇಲ್ಲಿ.‌ ಇದರಿಂದ ನಲುಗಿ ಹೋಗಿದ್ದಾರೆ. ಇದುವರೆಗೆ ಇದ್ದ ಯಾರೂ ಕೂಡಾ ಇದರ ಪರಿಹಾರಕ್ಕೆ ಪ್ರಯತ್ನ ಮಾಡಿಲ್ಲ. ಆದ್ದರಿಂದ ಈ‌ನಿಟ್ಟಿನಲ್ಲಿ ಕೆಲಸ ಆಗಬೇಕು. ಮಂಗ‌ಗಳ ಹಾವಳಿಗೆ ಪರಿಹಾರ‌ ನೀಡಬೇಕು ಎಂದು ಕಾಂಗ್ರೆಸ್ ‌ಅಭ್ಯರ್ಥಿ ಎ.ಎಸ್. ಪೊನ್ನಣ್ಣ ರಲ್ಲಿ ಬೇಡಿಕೆ‌ ಇರಿಸಿದರು.

ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಕಾಂಗ್ರೆಸ್ ‌ಪ್ರಚಾರ ಸಮಿತಿ‌ ಜಿಲ್ಲಾಧ್ಯಕ್ಷ ಟಿ.ಪಿ.‌ರಮೇಶ್, ವಿರಾಜಪೇಟೆ ‌ಪ್ರಚಾರ ಸಮಿತಿ ಅಧ್ಯಕ್ಷ ಕೊಲ್ಯದ ಗಿರೀಶ್, ಕಾಂಗ್ರೆಸ್ ನಾಯಕರಾದ ಎನ್.ಸಿ. ಮನೋಹರ, ಸೋಮಶೇಖರ್ ಕೊಯಿಂಗಾಜೆ, ಮಹಮ್ಮದ್ ಕುಂಞಿ‌ಗೂನಡ್ಕ ವೇದಿಕೆಯಲ್ಲಿದ್ದರು.

ಸುರೇಶ್ ಸಂಪಾಜೆ ಸ್ವಾಗತಿಸಿದರು.