ಮೇ.5; ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ

0

ಸುಳ್ಯದ ಸರಕಾರಿ ಪ.ದ.ಕಾಲೇಜಿನಲ್ಲಿ ಕಾರ್ಯಕ್ರಮ


ಸುಳ್ಯ ತಾಲೂಕು ಕ. ಸಾ. ಪ. ಹಾಗೂ ಸರಕಾರಿ ಪ್ರ.ದ. ಕಾಲೇಜು ಕೊಡಿಯಾಲ ಬೈಲು ಸುಳ್ಯ ಇದರ ಸಹಯೋಗದಲ್ಲಿ ಸ .ಪ್ರ‌‌ಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಮೇ.5 ರಂದು ಅಪರಾಹ್ನ 2 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್ .ಉದ್ಘಾಟಿಸಲಿರುವರು. ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು ಈ ವಿಷಯದ ಬಗ್ಗೆ ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಉಪನ್ಯಾಸ ನೀಡಲಿದ್ದಾರೆ. ಶಿಶಿಲ ಅವರ ನಾಟಕ ಅಮರ ಸುಳ್ಯ ಕ್ರಾಂತಿ 1837 ಇದರ ಕೃತಿ ಬಿಡುಗಡೆಯನ್ನು ಸುಳ್ಯ ಸ.ಪ್ರ‌.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಶಿ ಮಾಡಲಿದ್ದಾರೆ‌.ಜಿಲ್ಲಾ ಕಸಾಪ ಪ್ರತಿನಿಧಿ ರಾಮ ಚಂದ್ರ ಪಲ್ಲತಡ್ಕ ಇವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕ.ಸಾ.ಪ.ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಿನಂತಿಸಿದ್ದಾರೆ.