ಸರಕಾರಿ ನೌಕರರಿಗೆ ಶೇ.17. ಮಧ್ಯಂತರ ಪರಿಹಾರ ಭತ್ಯೆ ಮಂಜೂರು:ಪ್ರಥಮ ಹೆಚ್ಚುವರಿ ಸಂಬಳವನ್ನು ಸಮಾಜ ಕಾರ್ಯಕ್ಕೆ ಬಳಕೆ

0

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಉದ್ಯೋಗಿ ಕಾರ್ಯಕ್ಕೆ ಶ್ಲಾಘನೆ

ಸುಳ್ಯದ ಬಿ. ಇ. ಓ. ಕಚೇರಿಯಲ್ಲಿ ಪ್ರಭಾರ ಕಚೇರಿ ಅಧೀಕ್ಷಕರಾಗಿರುವ ಶಿವ ಪ್ರಸಾದ್ ಕೆ. ವಿ. ಅವರು ತನಗೆ ಸರಕಾರದ ವತಿಯಿಂದ ಮಂಜೂರಾದ 17ಶೇ. ಹೆಚ್ಚುವರಿ ವೇತನ ಖಾತೆಗೆ ಜಮೆ ಆಗಿರುವುದನ್ನು ಸ್ವಂತಕ್ಕೆ‌ ಬಳಸದೇ ಸಮಾಜಮುಖಿಯಾಗಿ‌ ವಿನಿಯೋಗಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಶಿವಪ್ರಸಾದ ಕೆ.ವಿ.ಯವರು ಗುತ್ತಿಗಾರಿನ ಕಡವೆಪಳ್ಳದವರು. ಸರಕಾರಿ ನೌಕರಿಯಾಗಿರುವ ಅವರಿಗೆ ಈ ಬಾರಿ ಶೇ.17 ಮಧ್ಯಂತರ ಪರಿಹಾರ ಭತ್ಯೆ‌ಖಾತೆಗೆ ಜಮೆ ಆಗಿತ್ತು. ಆ ಹೆಚ್ಚುವರಿ‌ ಮೊತ್ತವನ್ನು ತನ್ನೂರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ಸೇವೆ, ಅಗ್ನಿ ರಕ್ಷಕ ಸೇವೆ, ಯೋಗ ತರಬೇತಿ ಕೇಂದ್ರ, ರಕ್ತ ದಾನ ಶಿಬಿರ ಆಯೋಜನೆ, ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಗೆ ತಂಡದ ಸೇವೆ ಹಸ್ತಾಂತರ ಮಾಡಿದ್ದಾರೆ.

ದೇಣಿಗೆಯನ್ನು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಮೂಲಕ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಸೇವಾ ಚಾಲಕರಾದ ರಾಜೇಶ್ ಉತ್ರಂಬೆ ಉಪಸ್ಥಿತರಿದ್ದರು.

ಈ ಕುರಿತು ಸಂತಸ ಹಚ್ಚಿಕೊಂಡ ಶಿವಪ್ರಸಾದ ಕೆ.ವಿ.ಯವರು ನನ್ನೂರಿನ ಸಂಘಟನೆಯೊಂದು ಊರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನನ್ನಿಂದಾದ ಸಣ್ಣ ಸೇವೆ ನೀಡಿದ್ದೇನೆ ಅಷ್ಟೇ ” ಎಂದು ಹೇಳಿದರು.