ಪುತ್ತೂರಿನ ಪ್ರಜ್ಞಾ ಮಾನಸಿಕ ಭಿನ್ನ ಸಾಮರ್ಥ್ಯದ ಆಶ್ರಮದಲ್ಲಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ದಿ.ಯು.ಡಿ.ಶೇಖರ್ ರವರ 56 ನೇ ಹುಟ್ಟುಹಬ್ಬ ಆಚರಣೆ

0

ತಾಲೂಕಿನ ಜನೋಪಕಾರಿ, ದಕ್ಷ, ಪ್ರಾಮಾಣಿಕ ಮತ್ತು ಪಂಚಾಯತ್ ರಾಜ್ ಪರಿಣಿತ ಅಧಿಕಾರಿ ಎಂದು ಹೆಸರು ಪಡೆದಿದ್ದ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ದಿ l ಯು. ಡಿ. ಶೇಖರ್ ರವರ 56 ನೇ ಹುಟ್ಟುಹಬ್ಬವನ್ನು ಮೇ.04 ರಂದು ಆಚರಿಸಲಾಯಿತು.
ಅವರ ಪತ್ನಿ ಮತ್ತು ಮಕ್ಕಳು ಪುತ್ತೂರು ಬೀರಮಲೆಯಲ್ಲಿರುವ ಪ್ರಜ್ಞಾ ಮಾನಸಿಕ ಭಿನ್ನ ಸಾಮರ್ಥ್ಯ ದ ಆಶ್ರಮದಲ್ಲಿ ಜನ ಮಾನಸಕ್ಕೆ ಮಾದರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದರು. ದಿ. ಯು. ಡಿ.ಶೇಖರ್ ರವರ ಭಾವಚಿತ್ರದ ಎದುರು ದೀಪ ಹಚ್ಚಿ ಕೇಕ್ ಕತ್ತರಿಸಿ ಆಶ್ರಮ ಮುನ್ನಡೆಸುತ್ತಿರುವ ಅಣ್ಣಪ್ಪ ರವರಿಗೆ ಧನ ಸಹಾಯ ಹಸ್ತಾಂತರಿಸಲಾಯಿತು.
ಬಳಿಕ ಮಕ್ಕಳಿಗೆ ಸಿಹಿ ಹಂಚಿ ಮಾದರಿಯಾಗಿ ಹುಟ್ಟು ಹಬ್ಬ ಆಚರಿಸಿದರು.