ಅನುತ್ತೀರ್ಣ, ಓದು ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಬೆಳ್ಳಾರೆಯ ಜ್ಞಾನದೀಪ ಆಸರೆ

0


ಶಿಕ್ಷಣದ ಪ್ರಮುಖ ಘಟ್ಟವಾದ ಪಿಯುಸಿ ಮತ್ತು ಎಸ್.ಎಸ್ ಎಲ್.ಸಿಯಲ್ಲಿ ಅನುತ್ತೀರ್ಣ ರಾಗುವ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಕನಸು ಕಮರಿ ಹೋಗುತ್ತೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅನುತ್ತೀರ್ಣತೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತದೆ. ಆದರೆ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತೀರುವ ಜ್ಞಾನ ದೀಪ ಶಿಕ್ಷಣ ಸಂಸ್ಥೆ ಅನುತ್ತೀರ್ಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಆಶಾಕಿರಣವಾಗಿ ಮಿಂಚುತ್ತಿದೆ.ಹಿಂದಿನ ತರಗತಿ ಯಲ್ಲಿ ಅನುತ್ತೀರ್ಣಗೊಂಡ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ.,ಪಿಯುಸಿ ಪರೀಕ್ಷೆ ಬರೆದು ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನು ಉಪಯೋಗಿಸಿಕೊಂಡು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೋರಿಸಿಕೊಡುವ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀಣ ಗೊಂಡ ವಿದ್ಯಾರ್ಥಿಗಳು ಅಥವಾ 10ನೇ,ತರಗತಿ ಪಾಸಾದವರು ದ್ವಿತೀಯ ವಾಣಿಜ್ಯ ಅಥವಾ ಕಲಾ ವಿಭಾಗಕ್ಕೆ ಹಾಗೂ7,8,9,ನೇ ತರಗತಿಯಲ್ಲಿ ಅನುತ್ತೀರ್ಣ ರಾದವರಿಗೆ ನೇರವಾಗಿ ಎಸ್.ಎಸ್.ಎಲ್.ಸಿ ತರಗತಿಗೆ ಸೇರ್ಪಡೆ ಮಾಡಲಾಗುತ್ತಿದೆ. ಅನುತ್ತೀರ್ಣ ವಿದ್ಯಾರ್ಥಿಗಳ ಪಾಲಿಗೆ ಆಶಾದಾಯಕವಾಗಿರುವ ಜ್ಞಾನ ದೀಪ ಸಾಧನೆಯ ಬೆಳಕಿನಲ್ಲಿ ಶೋಭಿಸುತ್ತೀದೆ.ತನ್ನ ಹೊಸ ಯೋಜನೆ,ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಬಲವಾದ ಹೆಜ್ಜೆ ಊರಿದ ಈ ಸಂಸ್ಥೆ ತನ್ನ ಪಥದಲ್ಲಿ ಅನೇಕ ಜೀವನ ಪರ ಮೈಲಿಗಲ್ಲು ಗಳನ್ನು ನೆಟ್ಟದೆ. ಗ್ರಾಮೀಣರ,ಬಡವರ ಪಾಲಿಗೆ ವರದಾನವಾಗಿರುವ ಈ ಸಂಸ್ಥೆ ವಿದ್ಯಾರ್ಥಿಗಳ ಬಾಳಿಗೆ ಹೊಸ ಸ್ವರೂಪ ನೀಡುತ್ತಿದೆ.


ಪ್ರಾಮಾಣಿಕ ಫಲಿತಾಂಶ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಅಂಕಗಳಿಸುವ ಸಾಮಥ್ಯ ೯ವಿದೆ ಎಂಬುವುದನ್ನು ಮನದಟ್ಟು ಮಾಡಿ ಕಲಿಸುವ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಲಿಯುವ ಹಠವನ್ನು ಹುಟ್ಟಿಸುತ್ತಾರೆ. ಪ್ರತಿವರ್ಷ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತೀರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕಳೆದ 15 ವರ್ಷಗಳಿಂದ ಸಂಸ್ಥೆ ಪ್ರಾಮಾಣಿಕ ಫಲಿತಾಂಶವನ್ನು ನೀಡುತ್ತ ಬಂದಿದೆ .
ವೈಯಕ್ತಿಕ ಬೆಳವಣಿಗೆಗೆ ಅವಕಾಶ
ಕನ್ನಡ ರಾಜ್ಯೋತ್ಸವವನ್ನು ,ಶಿಕ್ಷಕ ದಿನಾಚರಣೆಯನ್ನು ,ರಾಷ್ಟ್ರೀಯ ಯುವ ದಿನಾಚರಣೆ, ಭಾವೈಕ್ಯತಾ ದಿನಾಚರಣೆಯನ್ನೂ ಜ್ಞಾನದೀಪ ಶಿಕ್ಷಣ ಸಂಸ್ಥೆ ವಿಶೇಷ ರೀತಿಯಲ್ಲಿ ಮಾಡುತ್ತದೆ . ವರ್ಷದುದ್ದಕ್ಕೂ ಸಂಸ್ಥೆಯು ತಜ್ಞ ಸಂಪನ್ಮೂಲ ವ್ಯಕ್ತಿ ಗಳನ್ನು ಕರೆಸಿಕೊಂಡು ಅನೇಕ ಮೌಲಿಕ ತರಬೇತಿಗಳನ್ನು ನೀಡುತ್ತದೆ. ಸ್ವ ಉದ್ಯೋಗ ಮಾಹಿತಿ ಶಿಬಿರ, ಪರೀಕ್ಷಾ ಪೂರ್ವ ಸಿದ್ದಾತ ಶಿಬಿರ ,ವ್ಯಕ್ತಿತ್ವ ವಿಕಸನ ತರಬೇತಿ, ಉದ್ಯೋಗ ಕೌಶಲ ಶಿಬಿರ, ನಾಯಕತ್ವ ತರಬೇತಿ, ಮಾಸಿಕ ಸಂಘರ್ಷ ನಿವಾರಣಾ ತರಬೇತಿ, ಪರಿಣಾಮಕಾರಿ ಸಂವಹನ ತರಬೇತಿ ನಡೆಯುತ್ತದೆ.
ರೆಗ್ಯುಲರ್ ತರಗತಿಗಳಲ್ಲದೆ ಕಂಪ್ಯೂಟರ್ ತರಬೇತಿ, ನವೋದಯ ತರಬೇತಿ, ಎನ್.ಟಿ.ಟಿ.ಸಿ ತರಬೇತಿ ,ಮೊರಾರ್ಜಿ ತರಬೇತಿ ಮೊದಲಾದ ತರಬೇತಿಗಳನ್ನು ಸಂಸ್ಥೆ ಸಂಘಟಿಸುತ್ತಿದೆ. ಪ್ರತಿವರ್ಷವೂ ಜ್ಞಾನದೀಪ ದಲ್ಲಿ ವಾರ್ಷಿಕೋತ್ಸವದ ,ಪ್ರತಿಭಾ ಪುರಸ್ಕಾರ ನಡೆಯುತ್ತದೆ. ಹೆತ್ತವರ ಸಮಲೋಚನ ಸಭೆಗಳು ನಿರಂತರವಾಗಿ ನಡೆಯುತ್ತದೆ. ಜಗತ್ತಿಗೆ ಜ್ಞಾನದೀಪದ ಮಾಹಿತಿ ನೀಡಬಲ್ಲ ವೆಬ್‌ಸೈಟ್‌ ಹೊಂದಿರುವ ಜ್ಞಾನದೀಪ ಹೊರದೇಶಗಳಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡ ತನ್ನ ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮಾಹಿತಿ ತಲುಪಿಸುವ ಕಾರ್ಯ ಮಾಡಿದೆ.
15ವರ್ಷಗಳ ಶೈಕ್ಷಣಿಕ ಸೇವೆ
ಅನುತ್ತೀರ್ಣ ಹಾಗೂ ಓದು ನಿಲ್ಲಿಸಿದ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಮಾದರಿ ಶಿಕ್ಷಣ ಸಂಸ್ಥೆಯನ್ನು 2008ರಲ್ಲಿ ಆರಂಭಿಸಿದ ಜ್ಞಾನದೀಪ ಗುಣಮಟ್ಟದ ಫಲಿತಾಂಶ ಭರಿತ ಶಿಕ್ಷಣದೊಂದಿಗೆ 15 ವರ್ಷಗಳನ್ನು ಪೂರೈಸಿದೆ.ಫಲಿತಾಂಶದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಮುನ್ನಡೆಯುತ್ತಿರುವ ಬೆಳ್ಳಾರೆಯ ಜ್ಞಾನದೀಪ 16ನೇ ವರ್ಷಕ್ಕೆ ಕಾಲಿರಿಸಿದೆ.

LEAVE A REPLY

Please enter your comment!
Please enter your name here