ನಾಗಪಟ್ಟಣ ಪರಿಸರದಲ್ಲಿ ಬೀರುತ್ತಿರುವ ದುರ್ವಾಸನೆಯಿಂದ ಸಮಸ್ಯೆ

0

ಆಲೆಟ್ಟಿ ಗ್ರಾಮದ ನಾಗಪಟ್ಟಣ ಕೆ.ಎಫ್.ಡಿ.ಸಿ.ಕಾರ್ಖಾನೆಯಿಂದ ಹೊರ ಬಿಡುವ ಕೊಳಚೆ ನೀರಿನಿಂದಾಗಿ ಪರಿಸರವಿಡಿ ಗಬ್ಬು ವಾಸನೆಯಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಎಫ್.ಡಿ.ಸಿ ಕಾರ್ಖಾನೆಯಲ್ಲಿ ಹೊರ ಬಿಡುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದಿದರುವ ಕಾರಣದಿಂದ ಈ ಸಮಸ್ಯೆ ತಲೆದೋರಿದೆ ಎಂದು ಪರಿಸರದ ವಾಸಿಗಳು
ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಬೂಡು ರಾಧಾಕೃಷ್ಣ ರೈ ಯವರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.