ಮೀನಾ ಹರೀಶ್ ಕೋಡಿಯವರಿಗೆ ಶಿಕ್ಷಣ ಕೌಸ್ತುಭ ಪ್ರಶಸ್ತಿ

0


ಕನ್ನಡ ಮಿತ್ರರು ಯುಎಇ ಆಯೋಜನೆಯ ದುಬೈ ಕನ್ನಡ ಪಾಠಶಾಲೆ ನೀಡುವ ಶಿಕ್ಷಣ ಕೌಸ್ತುಭ ೨೦೨೩ ಪ್ರಶಸ್ತಿಗೆ ಮೂಲತಃ ಸುಳ್ಯದವರಾಗಿದ್ದು, ಈಗ ದುಬೈಯಲ್ಲಿ ನೆಲೆಸಿರುವ ಶ್ರೀಮತಿ ಮೀನಾ ಹರೀಶ್ ಕೋಡಿ ಭಾಜನರಾಗಿದ್ದಾರೆ.


ವೈವಾಹಿಕ ಜೀವನದ ಬಳಿಕ ಪತಿ ಹರೀಶ್ ಕೋಡಿಯವರೊಂದಿಗೆ ದುಬೈನಲ್ಲಿ ನೆಲೆಸಿರುವ ಇವರು ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ರಜಾ ದಿನಗಳಲ್ಲಿ ಕನ್ನಡ ಪಾಠ, ಪ್ರವಚನ ಮತ್ತು ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನವ ಪೀಳಿಗೆಗೆ ಕನ್ನಡ ಕಲಿಸಿ, ಭಾಷೆ ಉಳಿಸಿ ಧ್ಯೇಯ ವಾಕ್ಯದೊಂದಿಗೆ ಕನ್ನಡ ಪಾಠ ಶಾಲೆಯಲ್ಲಿ ಶಿಕ್ಷಕಿಯಾಗಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಕನ್ನಡ ಪಾಠಶಾಲೆಯ ೯ನೇ ವಾರ್ಷಿಕೋತ್ಸವದಲ್ಲಿ ಶಿಕ್ಷಣ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬದಿಯಡ್ಕ ಚಿನ್ನಪ್ಪ ಗೌಡ ಮತ್ತು ಲಲಿತಾರವರ ಪುತ್ರಿಯಾದ ಮೀನಾ ಪದವೀಧರೆಯಾಗಿದ್ದು, ಸಂಗೀತ, ಭರತನಾಟ್ಯ, ನಾಟಕ ಕಲಾವಿದೆಯಾಗಿಯೂ ಪ್ರತಿಭಾನ್ವಿತೆಯಾಗಿದ್ದು, ತಮ್ಮ ಕಾಲೇಜು ದಿನಗಳಲ್ಲಿ ಪ್ರೊ.ಶಂಕರ್‌ರವರ ಮ್ಯಾಜಿಕ್ ತಂಡದಲ್ಲೂ ಭಾಗವಹಿಸಿದ್ದರು.
ಸುದ್ದಿ ಬಿಡುಗಡೆ ವಾರಪತ್ರಿಕೆಯ ಕಂಪ್ಯೂಟರ್ ವಿಭಾಗದಲ್ಲಿ ಪುಟ ವಿನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದ್ದರು.