ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ-ಈ ಬಾರಿಯ ಸಾಂಪ್ರದಾಯಿಕ ಶೈಲಿಯ ಮತಗಟ್ಟೆ

0

ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯು ಮೇ.10 ರಂದು ನಡೆಯಲಿದ್ದು ವಿಶೇಷವಾಗಿ ರಾಜ್ಯದ 40 ಮತಗಟ್ಟೆಗಳನ್ನು ಗುರುತಿಸಿ ತಾಲೂಕಿಗೆ ಒಂದರಂತೆ ಪರಿಶಿಷ್ಟ ಪಂಗಡದ ನಿವಾಸಿಗಳು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ನಿರ್ಮಿಸಿದ್ದು ಸುಳ್ಯ ತಾಲೂಕಿಗೆ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಈ ಬಾರಿಯ ಚುನಾವಣೆಗೆ ಸಾಂಪ್ರದಾಯಿಕ ಮತಗಟ್ಟೆ ಯಾಗಿ ಪರಿಗಣಿಸಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಬಡ್ಡಡ್ಕದಲ್ಲಿ ನಿರಂತರವಾಗಿ ಮತದಾನದ ಕೇಂದ್ರವಾಗಿ ಇದೇ ಶಾಲೆಯಲ್ಲಿ ಆಶ್ರಯ ಒದಗಿಸಲಾಗಿತ್ತು. ಕಳೆದ ವರ್ಷ ಶಾಲೆಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.
ನೂತನ ಕಟ್ಟಡದಲ್ಲಿ ಈ ಬಾರಿಯ ಚುನಾವಣೆಯ ಮತಗಟ್ಟೆಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಶಾಲೆಯ ಪರಿಸರವನ್ನು ಆಕರ್ಷಕವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಶೃಂಗರಿಸುವ ಕಾರ್ಯ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಾಡಲಾಗಿದೆ.

ಈ ಬಾರಿಯ ಮತದಾನದಲ್ಲಿ ಶೇ.100% ಮತದಾನವನ್ನು ಬಡ್ಡಡ್ಕ ಮತದಾನ ಕೇಂದ್ರದಲ್ಲಿ ಮಾಡಿಸುವ ಸಲುವಾಗಿ ಶಾಲೆಯ ಆಡಳಿತ ಮಂಡಳಿಯ ಗೌರವಾಧ್ಯಕ್ಷೆ ಶ್ರೀಮತಿ ವೇದಾವತಿ ಅನಂತ, ಅಧ್ಯಕ್ಷೆ ಡಾ.ಸಾಯಿಗೀತಾ ,
ಸಂಚಾಲಕ
ಡಾ|ಎನ್.ಎ.ಜ್ಞಾನೇಶ್ ಮತ್ತು ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಯವರು ಮುತುವರ್ಜಿ ವಹಿಸಿಕೊಂಡು ಮತದಾನ ಜಾಗೃತಿ ಕಾರ್ಯವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿರುತ್ತಾರೆ.