ಶ್ರೀಮತಿ ಹೊನ್ನಮ್ಮ ಕೇಪು ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ

0

ಕನಕಮಜಲು ಗ್ರಾಮದ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್ ಅವರ ಧರ್ಮಪತ್ನಿ ಶ್ರೀಮತಿ ಹೊನ್ನಮ್ಮ ಕೇಪು ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಕನಕಮಜಲಿನ ಶ್ರೀ ಆತ್ಮಾರಾಮ ಸಭಾಭವನದಲ್ಲಿ ಮೇ.6ರಂದು ಮಧ್ಯಾಹ್ನ ಜರುಗಿತು.


ಪೆರುವಾಜೆ ಡಾ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಅವರು ಶ್ರೀಮತಿ ಹೊನ್ನಮ್ಮ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಕೇಪು ಸುಂದರ ಮಾಸ್ತರ್, ವಸಂತ ಕೆ.ಎಸ್., ಶ್ರೀಮತಿ ಗೀತಾಕುಮಾರಿ, ರವಿಪ್ರಕಾಶ್, ಶ್ರೀಮತಿ ಶುಭ, ಶ್ರೀಮತಿ ಮಲ್ಲಿಕಾ ಕೆ.ಎಸ್. ಲಿಂಗಪ್ಪ ಗೌಡ ಅಳಿಕೆ , ಶ್ರೀಮತಿ ಹೇಮಲತಾ ಕೆ.ಎಸ್., ಡೊಂಬಯ್ಯ ಗೌಡ ನಿಡ್ಲೆ, ಶ್ರೀಮತಿ ಉಷಾ ಕೆ‌.ಎಸ್., ಚಂದ್ರಶೇಖರ ಪೇರಾಲು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು ಸೇರಿದಂತೆ ಹಿತೈಷಿಗಳು ಉಪಸ್ಥಿತರಿದ್ದರು.