ಕರ್ಮಜೆ ದಿ. ನಾಗಣ್ಣ ಗೌಡ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ

0

ಇತ್ತೀಚಿಗೆ ನಿಧನರಾದ ಅಮರಪಡ್ನೂರು ಗ್ರಾಮದ ಕರ್ಮಜೆ ದಿ.ನಾಗಣ್ಣ ಗೌಡರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಮೇ. 6 ರಂದು ಕರ್ಮಜೆ ಮನೆಯಲ್ಲಿ ನಡೆಯಿತು.

ಇಟ್ಟಿಗುಂಡಿ ಚಿನ್ನಪ್ಪ ಗೌಡರು ಮೃತರ ಬಗ್ಗೆ ಮಾತನಾಡಿ “ಸಂಸ್ಕಾರಯುತ ಜೀವನ ನಡೆಸಿ ಆದರ್ಶರಾದವರು ಕರ್ಮಜೆ ನಾಗಣ್ಣ ಗೌಡರು” ಎಂದು ಬಣ್ಣಿಸಿದರು.

ದಿ. ನಾಗಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಲೀಲಾವತಿ, ಪುತ್ರ ರಾಧಾಕೃಷ್ಣ, ಪುತ್ರಿ ಶ್ರೀಮತಿ ದುರ್ಗೆಶ್ವರಿ, ಅಳಿಯ ಲವ ಗೌಡ, ಸೊಸೆಯಂದಿರಾದ ಶ್ರೀಮತಿ ಶಾಂತ ರಾಧಾಕೃಷ್ಣ, ಶ್ರೀಮತಿ ಶುಭ ಚಂದ್ರಶೇಖರ, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.