ರಸ್ತೆಯಲ್ಲಿ ಬಿದ್ದು ಸಿಕ್ಕ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶ್ರೀನಿಧಿ ಮಾಣಿಬೆಟ್ಟು

0

ಶ್ರೀನಿಧಿ ಮಾಣಿಬೆಟ್ಟು

ಸುಳ್ಯದ ದೀಕ್ಷಾ ಟ್ರೇರ‍್ಸ್ ಬಳಿ ಶ್ರೀನಿಧಿ ಮಾಣಿಬೆಟ್ಟು ಹಾಗೂ ನವೀನ್ ಮಾವಜಿಯವರಿಗೆ 15,000 ನಗದು ಕಟ್ಟು ಬಿದ್ದು ಸಿಕ್ಕಿದ್ದು,
ಇದನ್ನು ಸುದ್ದಿ ಕಛೇರಿ ತಂದುಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.


ಬಳಿಕ ಸುದ್ದಿ ವೆಬ್‌ಸೈಟ್‌ನಲ್ಲಿ ಖಚಿತ ಮಾಹಿತಿ ನೀಡಿ ವಾರಸುದಾರರು ಪಡೆದುಕೊಳ್ಳುವಂತೆ ನ್ಯೂಸ್ ಪ್ರಕಟಗೊಳಿಸಲಾಗಿತ್ತು.

ಶಿವಪ್ರಸಾದ್ ಅಡ್ಪಗಾಂಯರಿಗೆ ಸುದ್ದಿ ಕಛೇರಿಯಿಂದ ಹಣ ಹಸ್ತಾಂತರ

ವರದಿ ನೋಡಿ ಹಣ ಕಳೆದುಕೊಂಡ ಶಿವಪ್ರಸಾದ್ ಅಡ್ಪಗಾಂಯರು ಸುದ್ದಿ ಕಛೇರಿಗೆ ಕರೆ ಮಾಡಿ ಖಚಿತ ಮಾಹಿತಿ ತಿಳಿಸಿದ ಹಿನ್ನಲೆಯಲ್ಲಿ ಹಣವನ್ನು ಅವರಿಗೆ ಹಸ್ತಾಂತರಿಸಲಾಗಿದೆ.