ಸುಬ್ರಹ್ಮಣ್ಯದಲ್ಲಿ ಚಂದ್ರಶೇಖರ್ ಮೇಲ್ನಾಡ್ ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0


ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಮೇ.6 ರ ಸಂಜೆ ಚಂದ್ರಶೇಖರ ಮೇಲ್ನಾಡು ಅವರಿಗೆ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು. ಆರಂಭದಲ್ಲಿ ಹಿರಿಯ ಅಧ್ಯಾಪಕ ದೊಡ್ಡಣ್ಣ ಗೌಡ ಹಾಗೂ ಸುಬ್ರಮಣ್ಯದ ಉದ್ಯಮಿ ಯಜ್ಞೇಶ್ ಆಚಾರ್ ಅವರು ದೀಪವನ್ನು ಬೆಳಗಿಸಿದರು.

ನಂತರ ಸಭೆಯಲ್ಲಿ ನೆರೆದಿದ್ದವರು ನುಡಿ ನಮನ ಸಲ್ಲಿಸಿದರು. ದೊಡ್ಡಣ್ಣ ಗೌಡ, ಯಜ್ಞೇಶ್ ಆಚಾರ್, ರಾಜೇಶ್ ಏನ್ ಎಸ್, ವೆಂಕಟೇಶ್ ಎಚ್ ಎಲ್, ವಿಮಲಾ ರಂಗಯ್ಯ, ಕೆ ವಸಂತ ಶೆಟ್ಟಿ, ಗೋಪಾಲ್ ಎಣ್ಣೆ ಮಜಲ್, ಅಚ್ಯುತ ಗೌಡ, ಜಯರಾಮ ಕಟ್ಟೆಮನೆ, ಮುಂತಾದವರು ಮೆಲ್ನಾಡ್ ಅವರ ಒಡನಾಟದ ಗುಣಗಾನವನ್ನು ಮಾಡಿ ನುಡಿ ನಮನ ಸಲ್ಲಿಸಿದರು. ಬಳಿಕ ನೆರೆದಿದ್ದ ಎಲ್ಲರೂ ಮೆಲ್ನಾಡ್ ಅವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು.

ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.