ಆಲೆಟ್ಟಿ: ಶೇಖಪಟ್ಟಿ ಎಂಬಲ್ಲಿ ಸೇತುವೆ ನಿರ್ಮಾಣದ ಭರವಸೆ- ಮತದಾನ ಬಹಿಷ್ಕಾರ ಹಿಂತೆಗೆದುಕೊಂಡ ನಾಗರಿಕರು

0

ಆಲೆಟ್ಟಿ ಗ್ರಾಮದ ಬಾಳೆಬಲ್ಪು ಶೇಖಪಟ್ಟಿ ಎಂಬಲ್ಲಿ ಸಂಪರ್ಕ ಸೇತುವೆ ನಿರ್ಮಿಸಿಲ್ಲ ಎಂಬ ಆರೋಪದಡಿ ಈ ಭಾಗದ ನಾಗರಿಕರು ಒಟ್ಟು ಸೇರಿ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡು ಬ್ಯಾನರ್ ಅಳವಡಿಸಿ ಪ್ರತಿಭಟನೆ ನಡೆಸಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಈ ಭಾಗದ ಮತದಾರರನ್ನು ಭೇಟಿ ಮಾಡಿ ಮನವೊಲಿಸಿರುವ ಕಾರ್ಯಕ್ಕೆ ಮುಂದಾಗಿರುತ್ತಾರೆ.


ಭಾರತೀಯ ಜನತಾ ಪಾರ್ಟಿಯ ಪ್ರಮುಖ ನಾಯಕರುಗಳಾದ ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ, ಜಯಪ್ರಕಾಶ್ ಕುಂಚಡ್ಕ, ಕೃಪಾಶಂಕರ ತುದಿಯಡ್ಕ ,ಧನಂಜಯ ಕುಂಚಡ್ಕ ಮತ್ತಿತರರು ಶೇಖಪಟ್ಟಿ ಸೇತುವೆ ನಿರ್ಮಾಣವಾಗಬೇಕೆಂಬ ಸ್ಥಳಕ್ಕೆ ತೆರಳಿ ಇಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಬಂದರೆ ಸೇತುವೆ ನಿರ್ಮಾಣದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಪಕ್ಷದ ನಾಯಕರ ಭರವಸೆಯ ಮೇಲೆ ವಿಶ್ವಾಸವಿರಿಸಿದ ಫಲಾನುಭವಿಗಳು ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊಂಡು ಎಲ್ಲಾ ಮನೆಯವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತದಾನ ಮಾಡುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.