ಏನೆಕಲ್ಲು:ಮಕ್ಕಳ ಭಜನಾ ತರಬೇತಿ ಸಮಾರೋಪ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನ ಮತ್ತು ಶ್ರೀ ಆದಿಶಕ್ತಿ ಭಜನಾ ಮಂದಿರ ಯೇನೆಕಲ್ಲು
ಇವುಗಳ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ
ಮಕ್ಕಳ ಭಜನಾ ತರಬೇತಿ ಮೇ.5 ರಂದು ಸಮಾಪನ ಗೊಂಡಿತು.

ಭಜನಾ ಮಂದಿರದ ಅಧ್ಯಕ್ಷ ಗಿರಿಯಪ್ಪ ಗೌಡ ಬಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ಶಿಷ್ಟಾಚಾರ ಅಧಿಕಾರಿ ವೆಂಕಟ್ರಾಜು ಪ್ರಮಾಣ ಪತ್ರ ವಿತರಿಸಿದರು.ಹಿರಿಯ ಭಜಕ ವೆಂಕಪ್ಪ ಗೌಡ ಬನ ಅತಿಥಿಯಾಗಿದ್ದರು.
ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ನಾಗೇಶ್ ನೆಕ್ರಾಜೆ, ಶಿಭಿರದ ವ್ಯವಸ್ಥಾಪಕ ಭವಾನಿ ಶಂಕರ ಪೂಂಬಾಡಿ, ಕಾರ್ಯದರ್ಶಿ ಕುಮಾರ್ ಪೈಲಾಜೆ, ಶಿವಪ್ರಸಾದ್ ಮೇಲ್ಕಟ್ಟ, ಶಿಬಿರದ ಸಂಯೋಜಕ ಮೋಹಿತ್ ಜೇನುಕೋಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎಂಟು ದಿನಗಳ ತರಬೇತಿ ಶಿಬಿರದಲ್ಲಿ 81 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರದ ಯಶಸ್ವಿಗೆ ಕಾರಣರಾದ ರಮೇಶ್ ಮೆಟ್ಟಿನಡ್ಕ, ಆನಂದ ಬಿ ಸಿ, ಶ್ರೀಮತಿ ಕಮಲ ಮೋಹನ್ ಕುl ಸ್ಮಿತಾ ಎಂ, ಕುl ಸುಜಸ್ವಿ ಎಂ, ಶ್ರೀಮತಿ ಲಿಂಗಮ್ಮ , ಶ್ರೀಮತಿ ಭವ್ಯ ಮೋಹಿತ್ ಜೇನು ಕೋಡಿ ಇವರನ್ನು ಗೌರವಿಸಲಾಯಿತು. ಮೋಹಿತ್ ಜೇನು ಕೋಡಿ ಸ್ವಾಗತಿಸಿದರು, ಕುಮಾರ ಪೈಲಾಜೆ ಧನ್ಯವಾದ ಸಮರ್ಪಿಸಿದರು, ಶೇಖರ ಕೇದಿಗೆಬನ ಕಾರ್ಯಕ್ರಮ ನಿರೂಪಿಸಿದರು. ತದನಂತರ ಅರ್ಧ ಏಕಹ ಭಜನೆ ನಡೆಯಿತು.