ಜಿ.ಕೆ.ಹಮೀದ್ ರಿಂದ ನೋಟಾ ಪರ ಪ್ರಚಾರ

0


ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ರವರು ನೋಟಾ ಪರ ಪ್ರಚಾರ ನಡೆಸುತ್ತಿದ್ದಾರೆಂದು ಅವರ ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಅದನ್ನು ಹಮೀದ್ ನಿರಾಕರಿಸಿದ್ದಾರೆ.
ಪಂಚಾಯತ್ ಅಧ್ಯಕ್ಷತೆ ಬಿಟ್ಟುಕೊಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದು ಹಮೀದ್ ರವರು ಕಾಂಗ್ರೆಸ್ ನಿಂದ ಉಚ್ಛಾಟಿತರಾಗಿದ್ದರು. ಈಗ ಅವರು ಯಾವ ಪಕ್ಷದ ಪರವೂ ಪ್ರಚಾರ ನಡೆಸದೆ ನೋಟಾ ಪರ ನೋಟೀಸು ಹಂಚಿ ಪ್ರಚಾರ ನಡೆಸಿದ್ದಾರೆ. ನೋಟಾದ ಬಗೆಗೆ ತಿಳಿಯಪಡಿಸುವ ಪ್ರಕಟಣೆಗಳನ್ನು ಸಂಪಾಜೆಯ ಕೆಲವು ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರಾಗಿದ್ದು ನೋಟಾ ಪರ ಪ್ರಚಾರ ಮಾಡುವುದು ಸರಿಯೇ ಎಂದು ಗ್ರೂಪ್ ಗಳಲ್ಲಿ ಜನರು ಕಮೆಂಟ್ ಮಾಡಿದ್ದಾರೆಂದೂ ತಿಳಿದುಬಂದಿದೆ.
” ಸರಿಯಾದ ಅಭ್ಯರ್ಥಿ ಇಲ್ಲದಿದ್ದರೆ ನೋಟಾ ಹಾಕಲು ಹೇಳಬಹುದು. ಆದರೆ ಹಮೀದರು ಕಾರಣ ಹೇಳದೆಯೇ ನೋಟಾಕ್ಕೆ ಹಾಕಲು ಹೇಳಿ ನೋಟೀಸು ನೀಡಿದ್ದಾರೆ ” ಎಂದು ಸಂಪಾಜೆ ಗ್ರಾಮಸ್ಥರಾದ ತಾಜುದ್ದೀನ್ ಟರ್ಲಿ ಸುದ್ದಿಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಈ ಬಗ್ಗೆ ಜಿ.ಕೆ.ಹಮೀದ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ ” ನಾನು ನೋಟಾ ಅಭಿಯಾನ ನಡೆಸುತ್ತಿಲ್ಲ. ಆ ಬಗ್ಗೆ ನನ್ನದು ನೋ ಕಮೆಂಟ್. ನಾನು ಮಾತ್ರ ನೋಟಾಕ್ಕೆ ಮತ ಹಾಕುತ್ತೇನೆ ” ಎಂದು ಹೇಳಿದರು.