ಸಂಪಾಜೆ: ಸವೇರಪುರ ಪ್ರೌಢಶಾಲೆಗೆ ಶೇ.92.03 ಫಲಿತಾಂಶ

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ಸವೇರಪುರ ಪ್ರೌಢಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92.03 ಫಲಿತಾಂಶ ದಾಖಲಾಗಿದೆ.
ಸಂಪಾಜೆ ಗ್ರಾಮದ ಗೂನಡ್ಕ ಪೆರಂಗೋಡಿ ಜಗದೀಶ ಹಾಗೂ ಶ್ರೀಮತಿ ಶಕುಂತಲಾ ದಂಪತಿಯ ಪುತ್ರಿ ಶ್ರಾವ್ಯ ಪಿ.ಜೆ. ಅವರು 612 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಒಟ್ಟು ಹದಿನೈದು ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.