ಪಂಜ: ಆಶಾ ತಿಮ್ಮಪ್ಪ ಗೌಡರ ಗೆಲುವಿಗಾಗಿ ಸೀಮೆಯ‌ ದೇವಳದಲ್ಲಿ ಪ್ರಾರ್ಥನೆ

0

ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಆಶಾ ತಿಮ್ಮಪ್ಪ ಗೌಡರು ಚುನಾವಣೆಯಲ್ಲಿ
ಗೆಲುವು ಸಾಧಿಸ ಬೇಕೆಂದು ಮೇ.8 ರಂದು ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪಂಜದ ಬಿಜೆಪಿ ಕಾರ್ಯಕರ್ತರು ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಶಿವರಾಮಯ್ಯ ಕರ್ಮಾಜೆ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕ ಲಿಗೋಧರ ಆಚಾರ್ಯ, ಮಂಗಳೂರು ಜನತಾ ಬಜಾರ್ ನಿರ್ದೇಶಕ ಚಿನ್ನಪ್ಪ ಚೊಟ್ಟೆಮಜಲು, ಪಂಜ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಕೃಷ್ಣನಗರ , ಜಯರಾಮ ಕೋಟ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ದೇವಳದ ಅರ್ಚಕ ರಾಮಚಂದ್ರ ಭಟ್ ಪ್ರಾರ್ಥಿಸಿ ಪ್ರಸಾದ ವಿತರಿಸಿದರು.