ಪಂಜದಲ್ಲಿ ಬಿಜೆಪಿ ಕಾರ್ಯಕರ್ತರಿಂದ ರೋಡ್ ಶೋ -ಮತಯಾಚನೆ : ಅಭ್ಯರ್ಥಿ ಭಾಗೀರಥಿ ಮುರುಳ್ಯರವರಿಂದ ಚಾಲನೆ

0

ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಆವರ ಪರವಾಗಿ ಪಂಜದ ಬಿಜೆಪಿ ಕಾರ್ಯಕರ್ತರು ಮೇ.8 ರಂದು ಸಂಜೆ ಪಂಜ ಪೇಟೆಯಲ್ಲಿ ರೋಡ್ ಶೋ ಮತ್ತು ಮತಯಾಚನೆ ನಡೆಸಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿಯಿಂದ ರೋಡ್ ಶೋ ಆರಂಭ ಗೊಂಡಿತು.


ಈ ವೇಳೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಕ್ಷದ ಮುಖಂಡರಾದ ಡಾ.ರಾಮಯ್ಯ ಭಟ್, ಶಿವರಾಮಯ್ಯ ಕರ್ಮಾಜೆ, ಎಸ್ ಎನ್ ಮನ್ಮಥ, ಎನ್ ಎ ರಾಮಚಂದ್ರ, ಭಜಪಾ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕರಾದ ಸಿ ಚಂದ್ರಶೇಖರ ಶಾಸ್ತ್ರಿ, ಸುಬ್ರಹ್ಮಣ್ಯ ಕುಳ,ಲಿಗೋಧರ ಆಚಾರ್ಯ, ಚಿನ್ನಪ್ಪ ಚೊಟ್ಟೆಮಜಲು, ವಾಚಣ್ಣ ಕೆರೆಮೂಲೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ಸದಸ್ಯರಾದ ನಾರಾಯಣ ಕೃಷ್ಣನಗರ, ಜಗದೀಶ್ ಪುರಿಯ,ಚಂದ್ರಶೇಖರ ದೇರಾಜೆ, ಶ್ರೀಮತಿ ವೀಣಾ ಪಂಜ, ಮಾಜಿ ಸದಸ್ಯರಾದ ಲೋಕೇಶ್ ಬರೆಮೇಲು, ಶ್ರೀಮತಿ ನಿರ್ಮಲಾ ಪಲ್ಲೋಡಿ, ರವಿ ಬಿ ನಾಗತೀರ್ಥ, ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಮೋನಪ್ಪ ಕೆಬ್ಲಾಡಿ, ಧರ್ಮಪಾಲ ಕಕ್ಯಾನ, ಚಂದ್ರಶೇಖರ ಮೇಲ್ಪಾಡಿ, ನಂದಕುಮಾರ್ ಗಟ್ಟಿಗಾರು,ಸಂತೋಷ್ ಜಾಕೆ , ಜಗದೀಶ್ ಪಂಬೆತ್ತಾಡಿ,ಮೋನಪ್ಪ ಗೌಡ ಬೊಳ್ಳಾಜೆ,ನೇಮಿರಾಜ ತೋಟ,ರೋಹಿತ್ ಚೀಮುಳ್ಳು,ಚೆನ್ನಕೇಶವ ಆಚಾರ್ಯ,ಪುರುಷೋತ್ತಮ ತೋಟ, ಸಚಿನ್ ತೋಟ
ಶೇಷಪ್ಪ ಕೆರೆಮೂಲೆ, ಪೂವಣಿ ಗೌಡ, ದಯಾನಂದ ಮೇಲ್ಮನೆ ಮೊದಲಾದವರು ಉಪಸ್ಥಿತರಿದ್ದರು.