ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ 100 ಫಲಿತಾಂಶ

0


ಮಾರ್ಚ್ ೨೦೨೩ರಲ್ಲಿ ಜರುಗಿದ ೧೦ನೆ ತರಗತಿಯ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ ೩೨ ಅಭ್ಯರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇಕಡಾ ೧೦೦ ಫಲಿತಾಂಶ ದಾಖಲಾಗಿದೆ. ಈ ತನಕ ಒಟ್ಟು ೧೬ ಬಾರಿ ೧೦೦ ಶೇಕಡಾ ಫಲಿತಾಂಶ ದಾಖಲಾಗಿದೆ.
ಹಾಜರಾದ ಒಟ್ಟು ೩೨ ಅಭ್ಯರ್ಥಿಗಳ ಪೈಕಿ ೫ ಅಭ್ಯರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೃಷಾ ಡಿ. ಸಾಲಿಯಾನ್ ? ೬೦೭ (ದಿನೇಶ್ ಕುಮಾರ್ ಡಿ. ಮತ್ತು ಮಮತಾ ಡಿ., ಬೆಳ್ಳಾರೆ ಇವರ ಪುತ್ರಿ), ಸನಾ ಫಾತಿಮಾ – ೫೫೧ (ಎಂ.ಎ. ರಫೀಕ್ ಮತ್ತು ಎಸ್. ಮುನೀರಾ, ಸವಣೂರು ಇವರ ಪುತ್ರಿ), ಸಮಹಿತ್ ಜೈನ್ ? ೫೪೫ (ಶತ್ರುಂಜಯ ಆರಿಗ ಮತ್ತು ಪ್ರಮೀಳಾ ಜೈನ್, ಬೆಳಂದೂರು ಇವರ ಪುತ್ರ), ಅತೀಕ್ಷ್ ಶೆಟ್ಟಿ ? ೫೪೨ (ಶ್ರೀನಿವಾಸ್ ಶೆಟ್ಟಿ ಮತ್ತು ಪ್ರತಿಭಾ ಶೆಟ್ಟಿ, ಮಾಡಾವು ಇವರ ಪುತ್ರ) ಮತ್ತು ನಿಷ್ಮತ್ ಫಾತಿಮಾ ? ೫೩೨ (ಕೆ. ಮಹಮ್ಮದ್ ಮತ್ತು ನೂರುನ್ನೀಸಾ, ಸವಣೂರು ಇವರ ಪುತ್ರಿ) ಇವರೆಲ್ಲರೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಉಳಿದಂತೆ ೨೫ ಅಭ್ಯರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ೨ ಅಭ್ಯರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಕಾಲೇಜಿನ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.