ರಾಜ್ಯ ವಿಧಾನಸಭಾ ಚುನಾವಣೆ : ಸುಳ್ಯ ಜಯನಗರದ ವಾರ್ಡ್ ನಲ್ಲಿ ಮತದಾನ ಮಾಡಲು ಸರತಿಯ ಸಾಲು

0

ಮತದಾನ ಆರಂಭಗೊಳ್ಳುವಾಗಲೇ ಕೈಕೊಟ್ಟ ಮತಯಂತ್ರ


ರಾಜ್ಯ ವಿಧಾನಸಭಾ ಚುನಾವಣೆಯು ಇಂದು ನಡೆಯುತ್ತಿದ್ದು, ಬೆಳಿಗ್ಗೆ 7:00 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಸುಳ್ಯ ಜಯನಗರ ಶಾಲಾ ಮತಗಟ್ಟೆಯಲ್ಲಿ ಬೆಳಿಗ್ಗೆ 7:00 ಯಿಂದ ಮತದಾನದ ಪ್ರಕ್ರಿಯೆ ಆರಂಭಗೊಂಡಿದ್ದರೂ ಪ್ರಾರಂಭದಿಂದಲೇ ಮತಯಂತ್ರ ಕೈಕೊಟ್ಟ ಕಾರಣ ತುಸು ವಿಳಂಬವಾಯಿತು.

ಕೂಡಲೇ ಮತಯಂತ್ರವನ್ನು ಸರಿಪಡಿಸಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಮತದಾನ ಮಾಡುವ ಸಂದರ್ಭದಲ್ಲಿ ಮತಯಂತ್ರದ ಡಿಸ್ ಪ್ಲೇ ಸರಿಯಾಗಿ ಕಾಣಿಸದ ಕಾರಣ 20 ನಿಮಿಷಗಳ ಕಾಲ ಗೊಂದಲ ಉಂಟಾಯಿತು. ಆಮೇಲೆ ಸಮಸ್ಯೆಗಳೆಲ್ಲವೂ ಬಗೆಹರಿದ ನಂತರ ಮತದಾನ ನಡೆಯಿತು.

ವಿಳಂಬದ ಕಾರಣದಿಂದ ಜಯನಗರದ ಮತಗಟ್ಟೆಯಲ್ಲಿ ಇದೀಗ ರಶ್ ಕಂಡುಬರುತ್ತದೆ. ಸರತಿಯ ಸಾಲಿನಲ್ಲಿ ಮತದಾನ ಮಾಡುವುದಕ್ಕಾಗಿ ಕಾಯುತ್ತಿದ್ದಾರೆ.

ಬಿಜೆಪಿ , ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತಗಟ್ಟೆಯ ಹೊರಗಡೆ ಬೂತ್ ನಲ್ಲಿ ಇದ್ದಾರೆ.