ಗುತ್ತಿಗಾರು:ಕಲ್ಚರಲ್ ಸಮ್ಮರ್ ಕ್ಯಾಂಪ್ 2023 – ಸಮಾರೋಪ

0

ಗುತ್ತಿಗಾರು ದ.ಕ.ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಏ.11.ರಿಂದ ಏ.25.ರವರೆಗೆ ನಡೆದ ಕಲ್ಚರಲ್ ಸಮ್ಮರ್ ಕ್ಯಾಂಪ್ -2023 ಇದರ ಸಮಾರೋಪ ಸಮಾರಂಭವು ಗುತ್ತಿಗಾರು ಶ್ರೀದೇವಿ ಸಂಕೀರ್ಣ ಸಭಾಭವನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಕೆ ಬೆಲ್ಲಪ್ಪಗೌಡ ವಹಿಸಿದ್ದರು. ಕಾರ್ಯಕ್ರಲ್ಲಿ ಮುಖ್ಯ ಅತಿಥಿಗಳಾಗಿ ದುರ್ಗಪ್ಪ ಕುಲ್ಲಂಪಾಡಿ ,ಪ್ರವೀಣ್ ಎಡಮಂಗಲ, ಸುಬ್ಬಣ್ಣ ಗೌಡ , ಸಂತೋಷ್ ಕುಮಾರ್ ,ಶ್ರೀದೇವಿ ಪ್ರಸಾದ್ ಚಿಕ್ಮುಳಿ ಹಾಗೂ ಸಂಯೋಜಕಿ ರಚಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳಿಂದ ಹಾಡು ಕೋಗಿಲೆ ಎಂಬ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ
ಶ್ರೀಮತಿ ದೀಪ್ತಿ ಸ್ವಾಗತಿಸಿದರು .ಕೌಶಿಕ್ ವಂದಿಸಿದರು ಹರ್ಷಿತಾ. ಯು ನಿರೂಪಿಸಿದರು.