ಉಬರಡ್ಕ ಮಿತ್ತೂರು ಉರುಂಡೆಬೈಲು – ಕೆದಂಬಾಡಿ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ಪ್ರತಿಷ್ಠೆ

0

ಉಬರಡ್ಕ ಮಿತ್ತೂರು ಗ್ರಾಮದ ಉರುಂಡೆಬೈಲು – ಕೆದಂಬಾಡಿ ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಪ್ರತಿಷ್ಠೆ ಕೆಮ್ಮಟೆ ಬಾಬು ಗೌಡರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೇ.10 ಮತ್ತು ಮೇ .11 ರಂದು ನಡೆಯಿತು.


ಮೇ.10 ರಂದು ಸಂಜೆ ಕುತ್ತಿಪೂಜೆ,ಬಿಂಬವಾಸ,ಶುದ್ಧಿ ಹೋಮ ನಡೆಯಿತು.
ಮೇ.11 ರಂದು ಗುರುವಾರ ಬೆಳಿಗ್ಗೆ ಗಂಟೆ 6.00 ರಿಂದ ಗಣಪತಿ ಹೋಮ, ಬೆಳಿಗ್ಗೆ ಗಂಟೆ 7.15 ರಿಂದ 8.26 ರ ವೃಷಭ ಲಗ್ನದ ಸುಮುಹೂರ್ತದಲ್ಲಿ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ಪ್ರತಿಷ್ಠೆ ನಡೆಯಿತು.


ಈ ಸಂದರ್ಭದಲ್ಲಿ ತೀರ್ಥರಾಮ ಕೆದಂಬಾಡಿ ಮತ್ತು ಮನೆಯವರು ಹಾಗೂ ಕುಟುಂಬಸ್ಥರು, ಉರುಂಡೆಬೈಲು ಹತ್ತು ಸಮಸ್ತರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


ತಂಬಿಲ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 7.00 ರಿಂದ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.


ಬಳಿಕ ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.ಭಕ್ತಾದಿಗಳು ಆಗಮಿಸಿ ,ಶ್ರೀ ದೈವಗಳ ಗಂಧ – ಪ್ರಸಾದ ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ತೀರ್ಥರಾಮ ಕೆದಂಬಾಡಿ ತಿಳಿಸಿದ್ದಾರೆ.