ಬಾಳುಗೋಡು: ಡಾಮರೀಕರಣದ ಯಂತ್ರ ಹರಿದು ವ್ಯಕ್ತಿ ಸಾವು

0


ಬಾಳುಗೋಡಿನಲ್ಲಿ ಡಾಮರೀಕರಣದ ಯಂತ್ರ ಹರಿದು ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ಬಾಳುಗೋಡಿನಿಂದ ಇಂದು ವರದಿಯಾಗಿದೆ.
ಬಾಳುಗೋಡಿನ ಮೇದಪ್ಪ ಗೌಡ ಎಂಬವರು ಕೊಕ್ಕೊ ಮಾರಾಟ ಮಾಡಿ ವಾಪಾಸ್ಸಾಗುತಿದ್ದ ಸಂದರ್ಭ ಡಾಮರು ಹಾಕುತಿದ್ದ ಮೆಶಿನ್ ಡಾಮರು ಹಾಕುತಿತ್ತೆನ್ನಲಾಗಿದೆ. ಅದನ್ನು ಓವರ್ ಟೇಕ್ ಮಾಡಿ ಮುಂದೆ ಹೋದಾಗ ರಸ್ತೆಯಿಂದ ಇಳಿಸಿ ಮುಂದೆ ಹೋಗಿದ್ದಾರೆ. ಈ ವೇಳೆ ಬೈಕ್ ನೀರು ಹೋಗಲು ಮಾಡಿದ್ದ ಕಣಿಗೆ ಬಿದ್ದಿದ್ದು ಮೋನಪ್ಪ ಅವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಡಾಮರು ಹಾಕುತಿದ್ದ ಯಂತ್ರದ ಚೈನ್ ಅವರ ತಲೆಯ ಮೇಲೆ ಹರಿದಿದ್ದು ಅವರು ತೀವ್ರವಾಗಿ ಜಖಂ ಗೊಂಡಿದ್ದರು. ಆಸ್ಪತ್ರೆಗೆ ಕೊಂಡೊಯ್ದರೂ ಮೃತಪಟ್ಟರೆನ್ನಲಾಗಿದೆ.
ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗ, ಮಗಳು ಬಂಧುಗಳನ್ನು ಅಗಲಿದ್ದಾರೆ.