ಪ್ರವೀಣ್ ನೆಟ್ಟಾರು ಮನೆಗೆ ಹರೀಶ್ ಪೂಂಜಾ ಭೇಟಿ

0

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಪ್ರವೀಣ್ ನೆಟ್ಟಾರು ಮನೆಗೆ ಮೇ.11 ರಂದು ಭೇಟಿ ನೀಡಿದರು.
ಮನೆ ಸಮೀಪವಿರುವ ದಿ.ಪ್ರವೀಣ್ ನೆಟ್ಟಾರ್ ಪ್ರತಿಮೆಗೆ ನಮಸ್ಕರಿಸಿದರು.


ಬಳಿಕ ಪ್ರವೀಣ್ ರವರ ತಂದೆ,ತಾಯಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕುಟುಂಬದ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಜತೆಗಿದ್ದರು.