ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ಮಾಸಿಕ ಸಭೆ

0

ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ಮಾಸಿಕ ಸಭೆಯು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಲೋಲಾಜಾಕ್ಷ ಭೂತಕಲ್ಲು ಅವರ ಅಧ್ಯಕ್ಷತೆಯಲ್ಲಿ ಮೇ.20 ರಂದು ನಡೆಯಿತು.

ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ ಅವರು ನೂತನವಾಗಿ ಆಯ್ಕೆಯಾದ ಸುಳ್ಯದ ಶಾಸಕಿಯಾದ ಭಾಗೀರಥಿ ಮುರುಳ್ಯ ಅವರನ್ನು ಹಾಗೂ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ರೈತ ಸಂಘದ ಪರವಾಗಿ ಅಭಿನಂದಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಅವರು ರೈತ ಸಂಘದಿಂದ ಶಾಸಕರಾಗಿ ಆಯ್ಕೆಯಾದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಅಭಿನಂದಿಸುತ್ತಾ ಎಪಿಎಂಸಿ ಕಾಯಿದೆಯನ್ನು ವಾಪಾಸ್ ಪಡೆಯಲು ಒತ್ತಾಯಿಸಿದರು.


ವೇದಿಕೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಐವರ್ನಾಡು, ತಾಲೂಕು ಉಪಾಧ್ಯಕ್ಷ ಮಾಧವ ಗೌಡ ಸುಳ್ಯಕೋಡಿ, ಜತೆ ಕಾರ್ಯದರ್ಶಿ ಚೆನ್ನಕೇಶವ ಚೊಕ್ಕಾಡಿ ಉಪಸ್ಥಿತರಿದ್ದರು.