ಪುತ್ತೂರು ಶಾಸಕರಿಗೆ ಫೇಸ್ ಬುಕ್ ನಲ್ಲಿ ಕಮೆಂಟ್ ವಿಚಾರದಲ್ಲಿ ಕಾಂಗ್ರೆಸ್ ಆಕ್ರೋಶಕ್ಕೊಳಗಾದ ಪ್ರಮಿತ್ ರಾವ್ ಮನೆಗೆ ಸುಳ್ಯ ಶಾಸಕಿ, ಬಿಜೆಪಿ ನಾಯಕರ ಭೇಟಿ

0

ಪುತ್ತೂರು ಶಾಸಕ ಅಶೋಕ್ ರೈ ಅವರ ಕುರಿತು ಫೇಸ್ ಬುಕ್ ನಲ್ಲಿ ನಿಂದನಾತ್ಮಕ ರೀತಿಯಲ್ಲಿ ಕಮೆಂಟ್ ಹಾಕಿದ್ದಾರೆಂದು ಅವರ ಅಭಿಮಾನಿ ಬಳಗದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಒಳಗಾಗಿ ಬಳಿಕ ರಾಜಿಯಲ್ಲಿ ಇತ್ಯರ್ಥಗೊಂಡ ಪ್ರಕರಣದ ಪ್ರಮಿತ್ ರಾವ್ ಜಯನಗರ ಅವರ ಮನೆಗೆ ಸುಳ್ಯ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯ ಮತ್ತು ಭಾರತೀಯ ಜನತಾ ಪಾರ್ಟಿಯ ನಾಯಕರು ಭೇಟಿ ನೀಡಿದ್ದಾರೆ.

ಶಾಸಕರೊಂದಿಗೆ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ರೈತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ‌ಶಿಲ್ಪಾ ಸುದೇವ್ ಮತ್ತು ಜಯನಗರದ ಬಿಜೆಪಿ ಹಿರಿಯ ಕಾರ್ಯಕರ್ತರು ಜತೆಗಿದ್ದರು.