ಸುಳ್ಯ ತಾಲೂಕು ಗ್ಯಾರೇಜು ಮಾಲಕರ ಸಂಘದ 24 ನೇ ವಾರ್ಷಿಕ ಮಹಾಸಭೆ

0

ಗ್ಯಾರೇಜು ವೃತ್ತಿ ಒಂದು ನಂಬಿಕೆಯ ವೃತ್ತಿ : ಡಾ.ಲೀಲಾಧರ್

ಗ್ಯಾರೇಜು ಮ್ಹಾಲಕರ ಹಲವಾರು ಕನಸುಗಳಿವೆ ಅದನ್ನು ಸಕಾರಗೊಳಿಸಲು ಎಲ್ಲರೂ ಸಹಕರಿಸಿ: ಮಲ್ಲೇಶ್ ಬೆಟ್ಟಂಪಾಡಿ

ಸುಳ್ಯ ತಾಲೂಕು ಗ್ಯಾರೇಜು ಮ್ಹಾಲಕರ ಸಂಘ ಇದರ ವಾರ್ಷಿಕ ಮಹಾಸಭೆ ಮೆ.28 ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾಧರ್
ನೇರವೆರಿಸಿ ‘ಗ್ಯಾರೇಜು ವೃತ್ತಿಯಲ್ಲಿ ನಂಬಿಕೆ ಅತ್ಯಗತ್ಯ ಪ್ರತಿಯೊಬ್ಬರಿಗೂ ಒಂದೊಂದು ಗ್ಯಾರೇಜು ಅಥವಾ ಮೆಕಾನಿಕ್ ಗಳಲ್ಲಿ ನಂಬಿಕೆ ಇರುತ್ತದೆ ಅವರವರ ವಾಹನಗಳನ್ನು ಅವರವರ ನಂಬಿಕೆ ಮೆಕಾನಿಕ್ ಗಳಲ್ಲಿ ತೊರಿಸುತ್ತಾರೆ ಅದು ಅವರ ಮೇಲೆರಿರುವ ನಂಬಿಕೆ ಎಂದು ಹೇಳಿದರು.


ಅದರೊಂದಿಗೆ ನೀವು ಗ್ಯಾರೇಜು ನಲ್ಲಿ ವಾಹನಗಳ ತಪಾಸಣೆ ಮಾಡಿ ಅದರ ಸಮಸ್ಯೆಯನ್ನು ಕಂಡು ಹುಡುಕಿ ಪರಿಹಾರ ಕಂಡುಕೊಳ್ಳುತ್ತಿರಿ ಅದೇ ರೀತಿ ನಿಮ್ಮ ಕೆಲಸದ ಒತ್ತಡದ ಮಧ್ಯೆ ನಿಮ್ಮ ಅರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ ಅರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಗ್ಯಾರೇಜು ಮಾಲಕರು ಮತ್ತು ಮೆಕಾನಿಕ್ ಗಳಿಗೆ ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ನಿವೃತ್ತ ಸಿಇಒ ವಿಶ್ವನಾಥ ನಾಯರ್ ಗ್ಯಾರೇಜು ಮಾಲಕರಿಗೆ ಮತ್ತು ನೌಕರರಿಗೆ ತರಬೇತಿ ನೀಡಿದರು,ಹಿರಿಯ ಉದ್ಯಮಿ ಕಸ್ತೂರಿ ನರ್ಸರಿ ಮಾಲಕ ಮಧುಸೂದನ ಕುಂಭಕ್ಕೊಡು,ದ.ಕ ಜಿಲ್ಲಾ ಗ್ಯಾರೇಜು ಮ್ಹಾಲಕರ ಸಂಘದ ಮಾಜಿ ಅಧ್ಯಕ್ಷರಾದ ದಿವಾಕರ್ ಎಂ,ನ.ಪಂ ಸದಸ್ಯ ಬಾಲಕೃಷ್ಣ ಕೊಡಂಕೇರಿ,ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಮಿಲ,ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಅತ್ತಾವರ,ರೊ.ಲತಾ ಮಧುಸೂದನ್ ಮೊದಲಾದವರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಹಿರಿಯ ಗ್ಯಾರೇಜು ಮಾಲಕ ವಸಂತ ಪೂಜಾರಿ,ರಿಕ್ಷಾ ಚಾಲಕಿ ಶ್ರೀಮತಿ ಗೀತಾ,ಸುಳ್ಯ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಶ್ರೀಮತಿ ಪುಷ್ಪಾವತಿ ಯವರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಾಹುಕಾರ್ ಎಂ ಬಾಬ ಪೈ &ಕೊ ಕಂಪನಿ ವತಿಯಿಂದ ವಾಹನಗಳ ಆಯಿಲ್ ಉಪಯೋಗದ ಬಗ್ಗೆ ಮಾಹಿತಿ ಮತ್ತು ಮಾರಾಟ ಹಾಗೂ ಪ್ರದರ್ಶನ ನಡೆಯಿತು.

ಗ್ಯಾರೇಜು ಮ್ಹಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಜನಾರ್ದನ ದೋಳ ಮಂಡಿಸಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ‌ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸತ್ಯನಾರಾಯಣ, ಕಾರ್ಯದರ್ಶಿ ಮನೋಹರ ಬೊಳ್ಳೂರು ಸಮಿತಿ ನಿರ್ದೇಶಕರು ಸಹಕರಿಸಿದರು.
ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.