Home ಪ್ರಚಲಿತ ಸುದ್ದಿ ಸುಳ್ಯ ಸ.ಪ.ಪೂ.ಕಾಲೇಜು ವಿದ್ಯಾರ್ಥಿ ಸರಕಾರ ರಚನೆ

ಸುಳ್ಯ ಸ.ಪ.ಪೂ.ಕಾಲೇಜು ವಿದ್ಯಾರ್ಥಿ ಸರಕಾರ ರಚನೆ

0

ನಾಯಕ: ಲಿಖಿತ್ ಎಸ್ , ಉಪನಾಯಕ: ಸೃಜನಾದಿತ್ಯ ಶೀಲ

ಪ್ರತಿಜ್ಞಾ ವಿಧಿ ಬೋಧನೆ


ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರದ ನಾಯಕನಾಗಿ ಹತ್ತನೇ ತರಗತಿ ಎ ವಿಭಾಗದ ಲಿಖಿತ್ ಎಸ್(128) ಹಾಗೂ ಉಪನಾಯಕನಾಗಿ ಒಂಬತ್ತನೇ ತರಗತಿಯ ಡಿ ವಿಭಾಗದ ಸೃಜನಾದಿತ್ಯ ಶೀಲ ಕೆ(438) ಬಹುಮತಗಳೊಂದಿಗೆ ಆಯ್ಕೆಯಾಗಿರುತ್ತಾರೆ. ಇಲೆಕ್ಟ್ರಾನಿಕ್ ಮತ ಯಂತ್ರದ ಆಪ್ ಮೂಲಕ ನಡೆದ ಈ ಮತದಾನ ಪಕ್ರಿಯೆಯಲ್ಲಿ ಒಟ್ಟು 603 ವಿದ್ಯಾರ್ಥಿಗಳು ಮತದಾನ ಮಾಡಿ ಶಾಲಾ ನಾಯಕ, ಉಪನಾಯಕ ಹಾಗೂ ತರಗತಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಈ ಚುನಾವಣೆಯಲ್ಲಿ ನಾಯಕನ ಸ್ಥಾನಕ್ಕೆ ಹತ್ತನೇ ತರಗತಿಯ ಏಳು ಹಾಗೂ ಉಪನಾಯಕ ಸ್ಥಾನಕ್ಕೆ ಒಂಬತ್ತನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಸ್ವರ್ಧಿಸಿದ್ದರು.


ನಂತರ ನಡೆದ ಸರಕಾರ ರಚನಾ ಸಭೆಯಲ್ಲಿ 10 ಡಿ ತರಗತಿಯ ಗ್ರೀಷ್ಮಾಕೆ.ಎಸ್ ಸಭಾಪತಿಯಾಗಿ ಆಯ್ಕೆಯಾಗಿರುತ್ತಾರೆ.
ಇದಲ್ಲದ್ದೇ ತರಗತಿ ಪ್ರತಿನಿಧಿಗಳಾಗಿ ಆಯ್ಕೆಯಾದ ಮೋಕ್ಷಿತ್ ಬಿ, ಮಹಮ್ಮದ್ ರಾಫಿ(ಗೃಹ) ಮಹಮ್ಮದ್ ಇಶಾಂ, ಪ್ರಣಿತ್,ಸಾಕ್ಷಿ ಎ.ಆರ್ (ಆರೋಗ್ಯ), ಯತೀಶ್ ಎಂ, ವೈಷ್ಣವಿ(ನೀರಾವರಿ), ಸಾಗರ್, ದೀಕ್ಷಿತಾ ಎನ್, ಮೋಹಿತ್(ವಿಜ್ಞಾನ ಮತ್ತು ತಂತ್ರಜ್ಞಾನ) ಪ್ರತೀಕ್ಷಾ ರೈ, ಆರ್ತಿಕ್ ಶೆಟ್ಟಿ (ಸಾಂಸ್ಕೃತಿಕ), ಮಹಮ್ಮದ್ ಅದ್ನಾನ್, ಅಶ್ವಿಲ್ ಪಡ್ಡಂಬೈಲು, ಅರ್ಪಿತಾ (ಕೃಷಿ, ಸೌಂದರ್ಯೀಕರಣ), ದರ್ಶಿತಾ ಸಿ, ಅಜಿತ್ ಕೆ ಬಿ, ದಿಶಾ(ಕಾರ್ಯಕ್ರಮ ಸಂಘಟನೆ), ಕವಿತಾ ಜೆ, ಸಾಯಿ ಹೇಮಂತ್, ನಿಧಿ ಎ.ಜೆ(ಶಿಸ್ತು, ಶಿಕ್ಷಣ),ದಿಶಾನ್ ಕೆ, ಪೃಥ್ವಿಕಾ( ಮಾಧ್ಯಮ ಮತ್ತು ಪ್ರಚಾರ), ಚೇತಸ್ ಬಿ, ಸೌಮ್ಯ ಜೆ(ಆಹಾರ) ಮಂತ್ರಿಗಳಾಗಿ ಆಯ್ಕೆಗೊಂಡಿರುತ್ತಾರೆ. ಶಶಾಂಕ (ವಿರೋಧ ಪಕ್ಷದ ನಾಯಕ) ರಫಾ ಫಾತಿಮ (ವಿರೋಧ ಪಕ್ಷದ ಉಪನಾಯಕಿ) ಪ್ರೇರಣ್ ರಾವ್, ಮೊಹಮ್ಮದ್ ಅಫೀಲ್, ಸೃಷ್ಟಿ ಕೆ.ಎಸ್, ಫಾತಿಮತ್ ಶಿಭಾ, ಪ್ರಣಾಮ್ ಜೆ, ಆಶಿಶ್ ಕೆ, ಮೊಹಮ್ಮದ್ ಹಾರಿಸ್ (ವಿರೋಧ ಪಕ್ಷದ ಸದಸ್ಯ) ನೇಮಕ ಮಾಡಲಾಗಿದೆ.
ಮಂತ್ರಿಮಂಡಲದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಜೂ 16 ರಂದು ನಡೆಯಿತು. ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಕಾರ್ಯಕ್ರಮ ಉದ್ಘಾಟಿಸಿದರು. ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಪ್ರತಿಜ್ಞಾ ವಿಧಿ ಬೋಧಿಸಿದರು.

NO COMMENTS

error: Content is protected !!
Breaking