ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಸುಳ್ಯ ಕ್ರೀಡಾಭಾರತಿ ಘಟಕದ ವತಿಯಿಂದ ಒಂಬತ್ತನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.

ಕಾರ್ಯಕ್ರಮವನ್ನು ಮಣಿಪಾಲ ಎಂ.ಐ.ಟಿ.ಯ ಪ್ರಾಚಾರ್ಯರು
ಹಾಗೂ ಮಂಗಳೂರು ಸೇವಾಭಾರತಿ ವಿಭಾಗದ ಪ್ರಮುಖ್ ನಾರಾಯಣ ಶೆಣೈ ಅವರು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು.
















ಬಳಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಸುಳ್ಯದ ಕ್ರೀಡಾಭಾರತಿ ಘಟಕದ ವತಿಯಿಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ನಡೆಸಿದ ಯೋಗ ಸ್ಪರ್ಧೆಯ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಗೌರವ ಸಲಹೆಗಾರರಾದ ನ.ಸೀತಾರಾಮ,ಸಂಚಾಕರಾದ ಸುಧಾಕರ ಕಾಮತ್, ಕ್ರೀಡಾ ಭಾರತಿ ಸುಳ್ಯ ಘಟಕದ ಅಧ್ಯಕ್ಷರಾದ ಎ.ಸಿ ವಸಂತ ಅಮಚೂರು, ಗೌರವಧ್ಯಕ್ಷರಾದ ಪುರುಷೋತ್ತಮ ಕಿರ್ಲಾಯ,ಉಪಾಧ್ಯಕ್ಷರಾದ ಶರತ್ ಅಡ್ಕಾರು,ಸದಸ್ಯರಾದ ಹರಿಪ್ರಕಾಶ್ ಅಡ್ಕಾರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲುಕು ಕಾರ್ಯವಾಹರಾದ ಕಿಶನ್ ಕೆ.ಜಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾದ ಎನ್. ಗೋಪಾಲ್ ರಾವ್,ವಿದ್ಯಾಸಂಸ್ಥೆ ಯ ಶಿಕ್ಷಕ – ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು .
ಕಾರ್ಯಕ್ರಮವನ್ನು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಜಯಪ್ರಸಾದ್ ಕಾರಿಂಜ ಸ್ವಾಗತಿಸಿ ,ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಗಿರೀಶ್ ಕುಮಾರ್ ವಂದಿಸಿದರು .ಪ್ರೌಢ ಶಾಲಾ ಸಹಶಿಕ್ಷಕಿ ಶ್ರೀಮತಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.









