Home ಪ್ರಚಲಿತ ಸುದ್ದಿ ಆಲೆಟ್ಟಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಸ್ಥಳೀಯ ಯುವಕರು

ಆಲೆಟ್ಟಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಸ್ಥಳೀಯ ಯುವಕರು

0

ಆಲೆಟ್ಟಿಯಲ್ಲಿ ಖಾಸಗಿ ಜಾಗದಲ್ಲಿ ಇರುವ ಬಾವಿಗೆ ಆಕಸ್ಮಿಕವಾಗಿ ಬಿದ್ದ ದನವೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ವರದಿಯಾಗಿದೆ.


ಶಶಿಧರ ಎಂಬವರ ಜಾಗದಲ್ಲಿ ಇರುವ ಬಾವಿಗೆ ಮೇಯಲು ಬಂದ ದನ ಬಿದ್ದಿರುವ ವಿಷಯ ತಿಳಿದು ಸ್ಥಳೀಯ ಯುವಕರು ಹಾಗೂ ದೊಡ್ಡೇರಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೇರಿ ದನವನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದರು.

ಬಾವಿಯಲ್ಲಿ ನೀರು ಹೆಚ್ಚು ಇದ್ದುದರಿಂದ ಪಂಪಿನ ಮೂಲಕ ನೀರು ಹಾಯಿಸಲಾಯಿತು. ಬಳಿಕ ಲಿಂಗಪ್ಪ ಉಳಿಯ ಮತ್ತು ಮಾಲಿಂಗ ಎಲಿಕ್ಕಳ ರವರು ಬಾವಿಗಿಳಿದು ದನಕ್ಕೆ ಹಗ್ಗ ಕಟ್ಟಿದರು. ಹಗ್ಗದ ಮೂಲಕ ದನವನ್ನು ಮೇಲಕ್ಕೆತ್ತಲಾಯಿತು.

NO COMMENTS

error: Content is protected !!
Breaking