ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಎಂಬ ಧಾರ್ಮಿಕ ಸಂಘಟನೆಯು 1926 ಜೂನ್ 26 ರಂದು ಪ್ರಾರಂಭಗೊಂಡಿದ್ದು.ಅದರ ವಾರ್ಷಿಕವಾಗಿ ಧ್ವಜಾರೋಹಣ ಕಾರ್ಯಕ್ರಮವೂ ಬೆಳ್ಳಾರೆ ಮಸೀದಿ ಮುಂಭಾಗದಲ್ಲಿ ಇಂದು ಬೆಳಿಗ್ಗೆ ನಡೆಯಿತು.
















ಧ್ವಜಾರೋಹಣ ವನ್ನು ಮದ್ರಸಾ ಮೇನೆಜ್ಮೇಂಟ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಹಾಗೂ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ( ರಿ) ಬೆಳ್ಳಾರೆ ಇದರ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಮಂಗಳ ನೆರವೇರಿಸಿದರು. ಮದ್ರಸ ಮೆನೆಜ್ಮೆಂಟ್ ಕಾರ್ಯದರ್ಶಿ ಬಶೀರ್ ಯು.ಪಿ ಸ್ವಾಗತಿಸಿ ಬಹು| ಹಸೈನಾರ್ ಮುಸ್ಲಿಯಾರ್ ರವರು ಪ್ರಾಸ್ತಾವಿಕ ವಾಗಿ ಮಾತಾಡಿದರು. ಜಮಾಲುದ್ದೀನ್ ಕೆ ಎಸ್ ಬೆಳ್ಳಾರೆ ಧನ್ಯವಾದ ಹೇಳಿದರು… ಕಾರ್ಯ ಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಿದರು.
ಕಾರ್ಯಕ್ರಮದಲ್ಲಿ, ಬಶೀರ್ ಕಲ್ಲಪನೆ, ನೆಟ್ಟಾರ್ ಮದ್ರಸ ಅಧ್ಯಕ್ಷ ರಾದ ಹನೀಫ಼್ ನೆಟ್ಟಾರ್ , ರಫ಼ೀಕ್ ಕಲ್ಲೊಣಿ, ಮಹಮ್ಮದ್ ಅಂದ್ರು, ಅಜ಼ರುದ್ದೀನ್ ಬೆಳ್ಳಾರೆ, ತಸ್ರೀಫ಼್ ನೆಟ್ಟಾರ್, ಮಹಮ್ಮದ್ ಕೈಫ಼್, ಸತ್ತಾರ್ ಪೆರುವಾಜೆ, ಅಜೀಜ್ ಮಾಸ್ತಿಕಟ್ಟೆ, ಹಾರಿಸ್ ಮಣಿಮಜಲ್, ಅಬ್ದುಲ್ಲ ಎನ್, ಇಸ್ಮಾಯಿಲ್ ರವರು ಸೇರಿದಂತೆ ಹಲವಾರು ಸಮಸ್ತ ಕಾರ್ಯಕರ್ತರು ಭಾಗವಹಿಸಿದ್ದರು.









