ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಯನಗರದಲ್ಲಿ ನಿರ್ಮಾಣ ಹಂತದ ಮನೆಯ ತಡೆಗೋಡೆ ಕುಸಿದು ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
















ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ವಾಸವಿರುವ ವೆಂಕಟೇಶ್ ತೋಳ್ಪಾಡಿ ಎಂಬುವವರ ನೂತನ ಮನೆಯ ಕಾಮಗಾರಿ ನಡೆಯುತ್ತಿದ್ದು, ಸುರಿಯುತ್ತಿರುವ ಭಾರಿ ಮಳೆಗೆ ಮನೆಯ ಒಂದು ಭಾಗದ ತಡೆಗೋಡೆ ಕುಸಿದು ಭಾರಿ ನಷ್ಟ ಸಂಭವಿಸಿದೆ.

ಈ ತಡೆಗೋಡೆಯ ಪಕ್ಕದಲ್ಲಿಯೇ ಜಯಣ್ಣ ಎಂಬುವವರ ಮನೆ ಇದ್ದು ತಡೆಗೋಡೆ ಕುಸಿತ ಉಂಟಾದ ಕಾರಣ ಆ ಮನೆಯ ಒಂದು ಬದಿ ಅಪಾಯದ ಸ್ಥಿತಿಗೆ ಬಂದಿದ್ದು ಆ ಮನೆಯವರಿಗೂ ಆತಂಕ ಉಂಟಾಗಿದೆ.









