ಸುಳ್ಯ ಜಯನಗರ ಬ್ರಹ್ಮರಗಯಾ ಶ್ರೀ ಅಯ್ಯಪ್ಪ ದೇವಸ್ಥಾನ.ರಿ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ಇತ್ತೀಚೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು.















ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಗಣೇಶ್ ಕೆ ಶಾಂತಿನಗರ ಇವರು ವಹಿಸಿದ್ದರು.
ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಮಂಡಿಸಿದರು. ಮುಂದಿನ ದಿನಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆಗಳು ನಡೆಯಿತು.
ಬಳಿಕ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧ್ಯಕ್ಷರಾಗಿ ಗಣೇಶ್ ಕೆ ಶಾಂತಿನಗರ ಅವರನ್ನು ಮರು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಹರೀಶ್ ಕೆ ಬೆಂಗಳೂರು, ಕೋಶಾಧಿಕಾರಿಯಾಗಿ ರಮೇಶ್ ಬ್ರಹ್ಮರ ಗಯ, ಉಪಾಧ್ಯಕ್ಷರುಗಳಾಗಿ ಗಿರೀಶ್,ಗಣೇಶ್ ಬ್ರಹ್ಮರಗಯಾ, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಕಾಮತ್, ಸದಸ್ಯರುಗಳಾಗಿ ರಾಧಾಕೃಷ್ಣ ನಾಯಕ್, ಕುಸುಮಾದರ ಕೆಜೆ, ಶಿವನಾಥ್ ರಾವ್, ರಾಕೇಶ್ ಕುಂಟಿಕಾನ, ಪ್ರವೀಣ್ ಕುಮಾರ್ ಎ ಎಂ, ದಾಮೋದರ ಕುಂಬ್ರ, ಶ್ರೀಮತಿ ಸರೋಜಿನಿ ಪೆಳ್ತಡ್ಕ, ಶಿವಪ್ರಸಾದ್ ಕೊಡಿಯಾಲ ಬೈಲು, ಅನುಷಾ ಎಚ್ಆರ್, ಅಜೇಶ್,ಸ್ರತೇಶ್ ರವರನ್ನು ಆಯ್ಕೆ ಮಾಡಲಾಯಿತು. ಪ್ರವೀಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










