ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಆತ್ಮರಾಮರವರು ಜು.15 ರಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.















ಜ.22 ರಂದು ಸುಳ್ಯ ಬಾಳೆಮಕ್ಕಿಯಲ್ಲಿ ಆತ್ಮರಾಮರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದು ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಪೂರ್ಣ ಗುಣಮುಖವಾಗಿರಲಿಲ್ಲ. ಬಳಿಕ ಅವರನ್ನು ಮನೆ ಕರೆತರಲಾಗಿತ್ತು. ವಾರದ ಹಿಂದೆ ಅಸೌಖ್ಯ ಉಲ್ಬಣಿಸಿದಾಗ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಜು.15 ರಂದು ಮುಂಜಾನೆ ಅವರು ನಿಧನರಾದರು.
ಆತ್ಮರಾಮರು ಬೆನಕ ಕ್ರೀಡಾ ಮತ್ತು ಕಲಾ ಸಂಘದ ಸಕ್ರಿಯ ಸದಸ್ಯರಾಗಿದ್ದರು.
ತಾಯಿ ಸಾವಿತ್ರಿ, ಸಹೋದರ ಮೋಹನ, ಸಹೋದರಿಯರಾದ ಶೀಲಾ, ಚಂದ್ರಾವತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









