Home ಪ್ರಚಲಿತ ಸುದ್ದಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

0

ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಭರತನಾಟ್ಯ ತರಗತಿಯನ್ನು ಜುಲೈ 15ರಂದು ಉದ್ಘಾಟಿಸಲಾಯಿತು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಭಟ್ ತಳೂರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿತವಚನ ನುಡಿದರು.


ವಿದ್ಯಾ ಸಂಸ್ಥೆಯ ಸಂಚಾಲಕರಾದ ಎ.ವಿ. ತೀರ್ಥರಾಮ ಅಂಬೆಕಲ್ಲು ಭರತನಾಟ್ಯದ ಪ್ರಾಮುಖ್ಯತೆಯನ್ನು ತಿಳಿಸಿದರು. ಭರತನಾಟ್ಯ ಶಿಕ್ಷಕಿ ಕುಮಾರಿ ರಚಿತಾ ಕಡ್ತಲಕಜೆಯವರು ಭರತನಾಟ್ಯ ತರಗತಿಯನ್ನು ವಿದ್ಯಾರ್ಥಿಗಳಿಗೆ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಮಹಾವೀರ ಜೈನ್, ಕೃಷ್ಣಯ್ಯ ಮೂಲೆತೋಟ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಇಂದಿರೇಶ ಗುಡ್ಡೆ, ಮುಖ್ಯ ಶಿಕ್ಷಕರಾದ ಗದಾಧರ ಬಾಳುಗೋಡು, ಶಿಕ್ಷಕರಕ್ಷಕ ಸಂಘದ ಸದಸ್ಯರಾದ ಅರುಣ್ ಅಂಬೆಕಲ್ಲು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕಿಯರಾದ ಶ್ರೀಮತಿ ಗೌತಮಿ ಹಾಗೂ ಕುಮಾರಿ ಪೂಜಾ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಗದಾಧರ ಬಾಳುಗೋಡು ಸ್ವಾಗತಿಸಿ, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀಮತಿ ಭಾರತಿ ಕೇಪಳಕಜೆ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS

error: Content is protected !!
Breaking