ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕ ಸಂಬಂಧ ಅಗತ್ಯ:ಬಿವಿಎಸ್
ಆಜಾದಿ ಕಾ ಅಮೃತ ಮಹೋತ್ಸವ ದ ಸವಿನೆನಪಿನಲ್ಲಿ ಎಂ.ಆರ್.ಪಿ.ಎಲ್ ಮಂಗಳೂರು ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ 75 ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ 75 ನೇ ಕಾರ್ಯಕ್ರಮವಾಗಿ ‘ಪ್ರೇರಣಾ ಕಾರ್ಯಾಗಾರ’ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು .
















ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಪ್ರೇರಣಾ ಕಾರ್ಯಗಾರ ಉದ್ಘಾಟಿಸಿ ತರಬೇತಿ ನೀಡಿದರು. ಉಪನ್ಯಾಸಕ ಚಂದ್ರಶೇಖರ ಆಲೆಟ್ಟಿ, ಉಪನ್ಯಾಸಕಿ ಬೃಂದಾ ಕುಂಜಾಡಿ ಉಪಸ್ಥಿತರಿದ್ದರು.ಉಪನ್ಯಾಸಕ ಶರತ್ ಕಲ್ಲೋಣಿ ವಂದಿಸಿದರು.
ಉಪನ್ಯಾಸಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರು ಕಾರ್ಯಗಾರದಲ್ಲಿ ಭಾಗವಹಿಸಿದರು.









