














ಗುತ್ತಿಗಾರು ಗ್ರಾಮ ಪಂಚಾಯತ್ ,ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಇವರ ವತಿಯಿಂದ ಗ್ರಂಥಾಲಯ ಪಿತಾಮಹ ಡಾ.ಎಸ್. ಆರ್. ರಂಗನಾಥನ್ ಜನ್ಮದಿನೋತ್ಸವ, ಗ್ರಂಥ ಪಾಲಕರ ದಿನಾಚರಣೆ ,ಸ್ವಾತಂತ್ರ ದಿನಾಚರಣೆ ಮತ್ತು ಮಕ್ಕಳ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ ಆ. 13 ರಂದು ಗುತ್ತಿಗಾರು ಗ್ರಾ.ಪಂ.ಗ್ರಂಥಾಲಯದಲ್ಲಿ ನಡೆಯಿತು .ಕ.ಸಾ.ಪ.ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿ ಬರಹಗಾರರು ಬರೆದ 58 ಸಣ್ಣ ಕಥೆಗಳ ಚಿಣ್ಣರ ಶೃಂಗಾರ ಸಂಕಲನವನ್ನು ನಿವೃತ್ತ ಪ್ರಾಂಶುಪಾಲ ಬಾಬು ಮಾಸ್ತರ್ ಅಚ್ರಪ್ಪಾಡಿ ಬಿಡುಗಡೆಗೊಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ನಿವೃತ್ತ ಮುಖ್ಯ ಗುರುಗಳಾದ ಜತ್ಪಪ್ಪ ಮಾಸ್ತರ್ ಚಿಲ್ತಡ್ಕ ಅಭಿನಂದಿಸಿದರು. ತಮ್ಮಲ್ಲಿದ್ದ 36 ಪುಸ್ತಕಗಳನ್ನು ಗ್ರಂಥಾಲಯಕ್ಕೆ ದೇಣಿಗೆ ನೀಡಿದರು.ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಸದಸ್ಯ ವೆಂಕಟ್ ವಳಲಂಬೆ, ಮಾಜಿ ತಾ.ಪಂ. ಅಧ್ಯಕ್ಷರಾದ ಮುಳಿಯ ಕೇಶವ ಭಟ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಬಿ. ಉಪಸ್ಥಿತರಿದ್ದರು.

ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಯೋಗೇಶ್ ಹೊಸೊಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ , ಸ್ವಾಗತಿಸಿದರು .ಗ್ರಂಥಾಲಯ ಮೇಲ್ವಿಚಾರಕ ಅಭಿಲಾಶ್ ಮೊಟ್ನೂರು ನಿರೂಪಿಸಿ,ವಂದಿಸಿದರು .ಪಂಚಾಯತ್ ಸಿಬ್ಬಂದಿಗಳಾದ ಜಯಪ್ರಕಾಶ್, ಚೋಮಯ್ಯ ಸಹಕರಿಸಿದರು.









