














ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಆ.25 ರಂದು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ
ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ಹರಿಹರ-ಬಾಳುಗೋಡು-ಐನೆಕಿದು ಗ್ರಾಮಸ್ಥರು ಸಹಭಾಗಿತ್ವದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ವರಮಹಾಲಕ್ಷ್ಮೀ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ರೇವತಿ ದಾಮೋದರ, ಶ್ರೀಮತಿ ತಾರಾ ಮಲ್ಲಾರ, ಅಧ್ಯಕ್ಷೆ ಸಾಯಿಗೀತಾ ರಘುರಾಮ್, ಸಮಿತಿಯ ಶ್ರೀಮತಿ ಶರ್ಮಿಳಾ ಗಿರೀಶ್, ಶ್ರೀಮತಿ ಬಾಗ್ಯ ನಾರಾಯಣ ಹಾಗೂ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ನೂರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.










