ಗಣೇಶ ಚತುರ್ಥಿ ಪ್ರಯುಕ್ತ ಹಮ್ಮಿಕೊಂಡ ಲಕ್ಕಿಡಿಪ್ ಕೂಪನ್ ನಲ್ಲಿ ಬಹುಮಾನವಾಗಿ ಬ್ಲಾಕ್ ಆಂಡ್ ವೈಟ್ ಮತ್ತು ಬಿಯರ್ ಒಂದು ಕೇಸ್ ಮದ್ಯದ ಬಾಟಲಿ ನೀಡುವುದಾಗಿ ಪ್ರಕಟಿಸಿದ್ದು ಇದರ ವಿರುದ್ಧ ಸುಳ್ಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯು ತೀವ್ರ ವಾಗಿ ಖಂಡಿಸಿರುತ್ತಾರೆ.















ಹಿಂದೂ ಧರ್ಮದ ಹಬ್ಬಗಳ ಆಚರಣೆಗೆ ಇಂತಹ ಮಾನಹಾನಿಕರ ವ್ಯವಸ್ಥೆಯ ಸಂಘಟಕರ ವಿರುದ್ಧಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುವ ವ್ಯವಸ್ಥೆಯ ವಿರುದ್ಧ ಕಡಿವಾಣ ಹಾಕಬೇಕೆಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ ಖಂಡಿಸಿದ್ದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.









