














ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಬೈಕ್ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಜಖಂಗೊಂಡಿರುವ ಘಟನೆ ಸೆ.23 ರಂದು ಮುಂಜಾನೆ ವರದಿಯಾಗಿದೆ.
ಸುಳ್ಯ ಜಿ.ಎಲ್. ಉದ್ಯೋಗಿ, ಅಯ್ಯನಕಟ್ಟೆ ನಿವಾಸಿ ಪ್ರಶಾಂತ್ ರವರು ಪತ್ನಿಯೊಂದಿಗೆ ಬೈಕ್ ನಲ್ಲಿ ಸುಳ್ಯಕ್ಕೆ ಬರುತಿದ್ದರು. ಬಾಂಜಿಕೋಡಿ ತಿರುವೊಂದರಲ್ಲಿ ಎದುರಿನಿಂದ ಬಂದ ಕಾರು ಹಾಗೂ ಬೈಕ್ ಅಪಘಾತವಾಯಿತು. ಪರಿಣಾಮ ಪ್ರಶಾಂತ್ ರ ಕಾಲಿಗೆ ಗಾಯವಾಗಿದೆ. ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತೆಂದು ತಿಳಿದುಬಂದಿದೆ.









