ಐವರ್ನಾಡಿನಲ್ಲಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ ನಾಗರೀಕ ಸೇವಾ ಸಮಿತಿ

0

ಐವರ್ನಾಡು ದೇರಾಜೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನು ದುರಸ್ಥಿಪಡಿಸುವಂತೆ ಮತ್ತು ನೆಟ್ ವರ್ಕ್ ಸಮಸ್ಯೆ ಸರಿಪಡಿಸುವ ಬಗ್ಗೆ ನಾಗರೀಕ ಸೇವಾ ಸಮಿತಿ ವತಿಯಿಂದ ಐವರ್ನಾಡು ಮುಖ್ಯ ರಸ್ತೆ ದೇವಸ್ಥಾನದ ದ್ವಾರದ ಬಳಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.
ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.


ಪಾದಚಾರಿಗಳಿಗೂ ಸಮಸ್ಯೆಯಾಗಿದೆ.
ಈ ಬಗ್ಗೆ ಹಲವು ಬಾರಿ ಇಲಾಖಾಧಿಗಳಿಗೆ,ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.ಕೂಡಲೇ ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹಾಗು ಪ್ರತಿಭಟನೆ ರಸ್ತೆತಡೆಯನ್ನು ನಡೆಸುವುದಾಗಿ ನಾಗರೀಕ ಸೇವಾ ಸಮಿತಿಯರು ಬ್ಯಾನರ್ ಅಳವಡಿಸಿದ್ದಾರೆ.