ಮೊರಂಗಲ್ಲು ಪ.ಜಾತಿ ಕಾಲನಿಯಲ್ಲಿ ಆರೋಗ್ಯ ಸೋಮವಾರ ಮತ್ತು ಚುಕ್ಕಿ ಚಂದ್ರಮ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಮೊರಂಗಲ್ಲು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಸೋಮವಾರ ಮತ್ತು ಚುಕ್ಕಿ ಚಂದ್ರಮ ಕಾರ್ಯಕ್ರಮವು ಅ.30 ರಂದು ಸಮುದಾಯ ಭವನದಲ್ಲಿ ನಡೆಯಿತು.


ಅ.21 ರಿಂದ 27 ರತನಕ ನಡೆದ ಅಯೋಡಿನ್ ದಿನಾಚರಣೆ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಅಯೋಡಿನ್ ಬಳಕೆ ಮತ್ತು ಜಾಗೃತಿಯ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಮಕ್ಕಳಲ್ಲಿ , ಮಹಿಳೆಯರಿಗೆ ಹಾಗೂ ಗರ್ಭಿಣಿ ಸ್ತ್ರೀಯರು ಆರೋಗ್ಯದ ಕುರಿತು ಮುಂಜಾಗ್ರತ ಕ್ರಮ ವಹಿಸಿಕೊಳ್ಳುವಂತೆ ಹಾಗೂ ಅಯೋಡಿನ್ ಅಂಶವುಳ್ಳ ಆಹಾರ ಸೇವನೆಯಿಂದ ರೋಗ ನಿವಾರಣೆಯ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ ಮಾಹಿತಿ ನೀಡಿದರು. ಸ್ಥಳೀಯರಾದ ದೇವಪ್ಪ ಮೊರಂಗಲ್ಲು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸುಂದರಿ ಮೊರಂಗಲ್ಲು, ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಯಶಸ್ವಿನಿ, ಆಶಾ ಕಾರ್ಯಕರ್ತೆ ಉಷಾ ಕಿರಣ ಆಲೆಟ್ಟಿ ವೇದಿಕೆಯಲ್ಲಿದ್ದರು.