














ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಪ್ರಭು ಮೈದಾನದಲ್ಲಿ ನ.17,18,19 ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಸಿದ್ಧ ಗೊಳ್ಳುತ್ತಿರುವ ಸ್ಟೇಡಿಯಂಗೆ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಅವರು ” ” “ಸುಳ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಇಂಡೋರ್ ಸ್ಟೇಡಿಯಂ ನಿರ್ಮಿಸಿ ಇತಿಹಾಸ ನಿರ್ಮಿಸುವ ರೀತಿಯಲ್ಲಿ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಪಂದ್ಯಾಟದ ಆಯೋಜನೆ ಮಾಡಿರುವ ಸಂಘಟಕರನ್ನು ಅಭಿನಂದಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು. ಸುಳ್ಯದಲ್ಲಿ ಇಂತಹ ಶಾಶ್ವತ ಇಂಡೋರ್ ಸ್ಟೇಡಿಯಂ ನಿರ್ಮಾಣವಾಗುವಂತಾಗಬೇಕು. ನಾನು ಒಬ್ಬ ಕ್ರೀಡಾ ಪ್ರೇಮಿಯಾಗಿದ್ದು ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾಟವನ್ನು ವೀಕ್ಷಿಸಲು ಸಮಯ ಮೀಸಲಿರಿಸುವುದಾಗಿ ಅವರು ತಿಳಿಸಿದರು.









