ಪೆರುವಾಜೆ ಶಾಲೆಯಲ್ಲಿ ಸಾಹಿತ್ಯ ರಚನೆಯ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ

0

ತಾಲೂಕಿನ ಉದಯೋನ್ಮುಖ ಕವಯಿತ್ರಿ ಶ್ರೀಮತಿ ಅಶ್ವಿನಿ ಕೊಡಿಬೈಲು ಇವರಿಂದ ನ.09ರಂದು ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆಯ ಕುರಿತು ಕಾರ್ಯಾಗಾರ ನಡೆಸಲಾಯಿತು. ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿ ಹಲವಾರು ಕಥೆ, ಕವನಗಳನ್ನು ರಚಿಸಿದರು. ಶ್ರೀಮತಿ ಅಶ್ವಿನಿ ಕೊಡಿಬೈಲು ತಾವು ರಚಿಸಿದ ಶಿಶುಗೀತೆಗಳನ್ನು ಮಕ್ಕಳ ಮುಂದೆ ಪ್ರಸ್ತುತ ಪಡಿಸಿದರು. ತಮ್ಮ ಅನುಭವಗಳನ್ನು ಮಕ್ಕಳ ಮುಂದಿಡುತ್ತಾ ಮಕ್ಕಳಿಗೆ ಸಾಹಿತ್ಯ ರಚನೆಯ ಬಗ್ಗೆ ಒಲವು ಮೂಡುವಂತೆ ಮಾಡಿದರು.


ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್, ಶಿಕ್ಷಕಿಯರಾದ ಶ್ರೀಮತಿ ರತ್ನಾವತಿ, ಶ್ರೀಮತಿ ಶೃತಿ, ಶ್ರೀಮತಿ ಲೀನಾ, ಶ್ರೀಮತಿ ಅಶ್ವಿತಾ ಉಪಸ್ಥಿತಿತರಿದ್ದರು.