ಗುತ್ತಿಗಾರು: ಕಮಿಲದ ಬಳಿ ಮಹಿಳೆ ಆತ್ಮಹತ್ಯೆ

0

ಗುತ್ತಿಗಾರಿನ ಕಮಿಲ ಬಳಿ ಮಹಿಳೆಯೊಬ್ಬರು ನೇಣು ಬಿಗಿದು ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ವರದಿಯಾಗಿದೆ.

ಕಮಿಲದ ಸತೀಶ್ ಎಂಬವರ ಪತ್ನಿ ಗೀತಾ ಎನ್ನುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯಾಗಿದ್ದು ಮಕ್ಕಳಾಗದಿರುವುದೇ ಆತ್ಮಹತ್ಯೆ ಕಾರಣ ಎನ್ನಲಾಗಿದೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಮೃತರ ಮನೆಗೆ ಸುಬ್ರಹ್ಮಣ್ಯ ಪೋಲಿಸರು ಆಗಮಿಸಿದ್ದು ಬಳಿಕ ಮೃತದೇಹವನ್ನು ಪೋಸ್ಟ್ ಮಾರ್ಟಂ ಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.