ಅಡ್ಪಂಗಾಯ ಅಯ್ಯಪ್ಪ ‌ಮಂದಿರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ

0

ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ ನಿಂದ ಸನ್ಮಾನ

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜಾ ಕಾರ್ಯಕ್ರಮವು ನ.19 ರಂದು ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ಸಂಕ್ರಮಣ ಪೂಜೆ ಹಾಗೂ ಸೇವಾರ್ಥ ದುರ್ಗಾಪೂಜಾ ಕಾರ್ಯಕ್ರಮವು ನಡೆಯಿತು. ಪ್ರಾತಃ ಕಾಲದಲ್ಲಿ ಗಣಪತಿ ಹವನದೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವು, ಸಂಜೆ ಗಂ.6-00 ಕ್ಕೆ ಸರಿಯಾಗಿ ಅಯ್ಯಪ್ಪ ವೃತಾಧಾರಿಗಳಿಂದ ದೀಪಾರಾಧನೆ, ಭಜನಾ ಕಾರ್ಯಕ್ರಮದೊಂದಿಗೆ ಸಾಗಿತು. ಈ ತಿಂಗಳ ಭಜನಾ ಸೇವೆಯನ್ನು ಶ್ರೀ ವರಮಹಾಲಕ್ಷ್ಮೀ ಆಚರಣಾ ಸಮಿತಿ ಅಜ್ಜಾವರದ ಮಹಿಳಾ ಸದಸ್ಯರುಗಳಿಂದ‌ ನಡೆಯಿತು.

ಮಾಸಿಕ ದುರ್ಗಾಪೂಜೆಯನ್ನು, ಶ್ರೀ ವೆಂಕಟ್ರಮಣ ಗೌಡ ಅತ್ಯಾಡಿ (ಪೇರಾಲು) ಇವರ ಸೇವಾರ್ಥವಾಗಿ ನೆರವೇರಿಸಲಾಯಿತು. ನಂತರ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜಾ ಕಾರ್ಯಕ್ರಮವು ನಡೆಯಿತು. ಈ ಸಲದ ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ, ಸುಳ್ಯ ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರೊಫೆಸರ್ ಡಾ. ಅವಿನಾಶ್’ರವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ, ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಮುಂದಾಳು ವೆಂಕಟ್ರಮಣ ಗೌಡ ಅತ್ಯಾಡಿ (ಪೇರಾಲು) ಹಾಗೂ ಸುಳ್ಯದಲ್ಲಿ ಸಮಾಜಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಶ್ರೀ ಬಳ್ಳಾರಿ ಮಂಜುನಾಥ್ ಅವರುಗಳನ್ನೂ ಶ್ರೀಕ್ಷೇತ್ರದ ಪರವಾಗಿ, ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯರವರು ಫಲ, ಪುಷ್ಪ, ಸನ್ಮಾನಪತ್ರದೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಶ್ರೀ ದೇವರ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು.