ಗಾಂಧಿನಗರ ಅಂಗನವಾಡಿ ಕೇಂದ್ರದದಲ್ಲಿ ಮಕ್ಕಳ ದಿನಾಚರಣೆ

0

ಶುಭಶ್ರೀ ಮಹಿಳಾ ಮಂಡಲ ಗಾಂಧಿನಗರ ಸುಳ್ಯ ಮತ್ತು ಅಂಗನವಾಡಿ ಕೇಂದ್ರ ಗಾಂಧಿನಗರ ಇದರ ವತಿಯಿಂದ
ಮಕ್ಕಳ ದಿನಾಚರಣೆ ಕಾರ್ಯಕ್ರಮ ವು ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶ್ಯೆಲಜಾ ರವರು ವಹಿಸಿದ್ದರು.

ವಲಯ ಮೇಲ್ವಚಾರಕಿ ಶ್ರೀಮತಿ ಉಷಾ, ನಗರ ಪಂಚಾಯತ್ ಸದಸ್ಯ ಶರೀಪ್ ಕಂಠಿ, ರೋಟರಿ ಪೂರ್ವಾಧ್ಯಕ್ಷ ಜೆ.ಕೆ.ರೈ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ವನಿತಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶುಭಶ್ರೀ ಮಹಿಳಾ ಮಂಡಳಿ ಯ ವತಿಯಿಂದ ಅಂಗನವಾಡಿಯ ಮಕ್ಕಳಿಗೆ ತಟ್ಟೆಗಳನ್ನು ಶ್ರೀಮತಿ ಶೈಲಜಾರವರಿಗೆ ಶಶಿಕಲಾ ಹರಪ್ರಸಾದ್ ಹಸ್ತಾಂತರಿಸಿದರು.


ಶುಭಶ್ರೀ ಮಹಿಳಾ ಮಂಡಳಿಯ ಕೋಶಾಧಿಕಾರಿ ಶ್ರೀಮತಿ ಗಿರಿಜಾ ಎಂ. ವಿ. ಮತ್ತು ಸದಸ್ಯೆ ಶ್ರೀಮತಿ ಮಮತಾ ಶೆಣೈಉಪಸ್ಥಿತರಿದ್ದರು.
ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ, ಸಹಾಯಕಿ ಪುಷ್ಪಾ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.