ಕೊಡಿಯಾಲಬೈಲು: ಬ್ರಹ್ಮರಗಯದ 46 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ಕಸಬಾದ ಕೊಡಿಯಾಲಬೈಲು ಬ್ರಹ್ಮರಗಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯಲಿರುವ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಇಂದು ಬೆಳಗ್ಗೆ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

ಈ ಬಾರಿ 46 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ನಡೆಯಲಿದ್ದು ಪೆರಾಜೆ ವೇದವ್ಯಾಸ ತಂತ್ರಿಯವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಗಣೇಶ್ ನಾಯ್ಕ್ ಪೈಚಾರು ಹಾಗೂ ಸದಸ್ಯರು,ಸಂಜೀವ ಗುರುಸ್ವಾಮಿ ಬೆಟ್ಟಂಪಾಡಿ ಮತ್ತು ಶಿಷ್ಯ ವೃಂದದವರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.